70 ರೂ. ಟಿಕೆಟ್ ನಲ್ಲಿ 10 ಸಿನಿಮಾ ವೀಕ್ಷಣೆಗೆ ಅವಕಾಶ: ಒಟಿಟಿ ರೀತಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ 699 ರೂ. ಚಂದಾದಾರಿಕೆ

ನವದೆಹಲಿ: ಒಟಿಟಿ ರೀತಿಯಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಸಿನಿಮಾ ನೋಡಲು ಚಂದಾದಾರಿಕೆ ಪಡೆಯಬಹುದಾಗಿದೆ.

ಪಿವಿಆರ್ ಐನಾಕ್ಸ್ ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ದೇಶದಲ್ಲೇ ಮೊದಲ ಸಿನಿಮಾ ಥಿಯೇಟರ್ ಚಂದಾದಾರಿಕೆ ಯೋಜನೆ ಆರಂಭಿಸಿದೆ. ಈ ಯೋಜನೆಯ ಮೂಲಕ ತಿಂಗಳಿಗೆ 699 ರೂಪಾಯಿ ಪಾವತಿಸಿ ಕೇವಲ 70 ರೂ. ಟಿಕೆಟ್ ಬೆಲೆಯಲ್ಲಿ 10 ಸಿನಿಮಾ ವೀಕ್ಷಿಸಬಹುದಾಗಿದೆ. ಸೋಮವಾರದಿಂದ ಗುರುವಾರದವರೆಗೆ ಈ ಯೋಜನೆ ಅನ್ವಯವಾಗುತ್ತದೆ. ವೀಕೆಂಡ್ ದಿನಗಳಲ್ಲಿ ಐಮ್ಯಾಕ್ಸ್ ಸೇರಿ ಪ್ರೀಮಿಯಂ ಸ್ಕ್ರೀನ್ ಗಳಿಗೆ ಈ ಚಂದಾದಾರಿಕೆ ಅನ್ವಯಿಸುವುದಿಲ್ಲ. ದಿನಕ್ಕೆ ಒಂದು ಸಿನಿಮಾ ನೋಡಲು ಮಾತ್ರ ಅವಕಾಶವಿದೆ. ಗ್ರಾಹಕರು ಮತದಾರರ ಗುರುತಿನ ಚೀಟಿ ಸೇರಿದಂತೆ ಯಾವುದೇ ಅಧಿಕೃತ ಗುರುತಿನ ಪತ್ರ ತೋರಿಸಿ ಚಿತ್ರಮಂದಿರ ಪ್ರವೇಶಿಸಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read