HomeInternational10 ವರ್ಷದ ಬಳಿಕ ಮತ್ತೊಮ್ಮೆ ತಾಯಿಯಾಗುತ್ತಿರುವುದನ್ನ ಪತಿಯೊಂದಿಗೆ ವಿಶೇಷವಾಗಿ ಹಂಚಿಕೊಂಡ ಪತ್ನಿ; ವಿಡಿಯೋ ವೈರಲ್

10 ವರ್ಷದ ಬಳಿಕ ಮತ್ತೊಮ್ಮೆ ತಾಯಿಯಾಗುತ್ತಿರುವುದನ್ನ ಪತಿಯೊಂದಿಗೆ ವಿಶೇಷವಾಗಿ ಹಂಚಿಕೊಂಡ ಪತ್ನಿ; ವಿಡಿಯೋ ವೈರಲ್

10 ವರ್ಷದ ಬಳಿಕ ಮತ್ತೊಂದು ಮಗುವಿಗೆ ತಂದೆಯಾಗುತ್ತಿದ್ದೇನೆಂದು ತಿಳಿದ ವ್ಯಕ್ತಿ ಆನಂದಬಾಷ್ಪ ಸುರಿಸಿದ್ದಾರೆ. ಒಂದು ದಶಕದ ಬಳಿಕ ಮತ್ತೊಂದು ಮಗುವಿಗೆ ತಾಯಿಯಾಗ್ತಿರುವ ಮಹಿಳೆ ಈ ಸಿಹಿಸುದ್ದಿಯನ್ನ ವಿಶೇಷವಾಗಿ ತನ್ನ ಪತಿ ಮತ್ತು ಮಗನೊಂದಿಗೆ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ವೀಡಿಯೋದಲ್ಲಿ ಮಹಿಳೆಯ ಪತಿ ಮತ್ತು ಮಗ ಒಟ್ಟಿಗೆ ಕುಳಿತಿದ್ದು ಪೆಟ್ಟಿಗೆಯನ್ನು ಅವರ ಮುಂದೆ ಇರಿಸಲಾಗಿದೆ. ಪೆಟ್ಟಿಗೆಯು ಮೃದುವಾದ ಆಟಿಕೆ ಮತ್ತು ಗರ್ಭಧಾರಣೆಯ ಪರೀಕ್ಷಾ ಕಿಟ್ ಅನ್ನು ಒಳಗೊಂಡಿದೆ. ಪೆಟ್ಟಿಗೆ ತೆರೆದು ನೋಡಿದ ಪತಿ ತಾನು ಮತ್ತೆ ತಂದೆಯಾಗಲಿದ್ದಾನೆ ಎಂದು ಅರಿತುಕೊಂಡ ಬಳಿಕ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಪತಿಯು “ನೀನು ಸುಳ್ಳು ಹೇಳುತ್ತಿರುವೆ” ಎಂದು ಪತ್ನಿಯನ್ನು ಪ್ರಶ್ನಿಸುತ್ತಾರೆ. ಆಗ ಮಹಿಳೆ ತಾನು ಸುಳ್ಳು ಹೇಳುತ್ತಿಲ್ಲ ಎಂದು ದೃಢಪಡಿಸುತ್ತಾರೆ. ತನ್ನ ಮಗನಿಗೂ ಸಹ ಆಕೆ ಪರಿಸ್ಥಿತಿಯನ್ನು ಅರ್ಥ ಮಾಡಿಸುತ್ತಾಳೆ. ತಾಯಿ ಮತ್ತೊಂದು ಮಗುವಿಗೆ ಜನ್ಮ ನೀಡುವ ಸುದ್ದಿ ಕೇಳಿ ಹುಡುಗನು ಸಹ ಸಂತೋಷಗೊಳ್ಳುತ್ತಾನೆ. ಈ ಭಾವನಾತ್ಮಕ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಮನಮುಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular