HomeBeautyಹೊಳೆಯುವ ತ್ವಚೆಗೆ 'ಅಲೋವೆರಾ' ಫೇಸ್‌ ಮಾಸ್ಕ್‌

ಹೊಳೆಯುವ ತ್ವಚೆಗೆ ‘ಅಲೋವೆರಾ’ ಫೇಸ್‌ ಮಾಸ್ಕ್‌

ವಾರಕ್ಕೊಮ್ಮೆ ಫೇಸ್‌ ಪ್ಯಾಕ್‌ ಹಾಕಿದರೆ ಮುಖದ ಹೊಳಪು ಹೆಚ್ಚಾಗುತ್ತದೆ. ಅದರಲ್ಲೂ ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಸೌಂದರ್ಯವರ್ಧಕ ವಸ್ತುಗಳನ್ನು ಬಳಸಿ ಫೇಸ್‌ಪ್ಯಾಕ್‌ ಅಥವಾ ಫೇಸ್‌ಮಾಸ್ಕ್‌ ಬಳಸಿದರೆ ಅದರ ರಿಸಲ್ಟ್ ಬೇರೆ.

ಹೀಗಾಗಿ ಎಲ್ಲಾ ತ್ವಚೆಗೆ ಹೊಂದುವ ನೈಸರ್ಗಿಕ ಹೋಮ್‌ ಮೇಡ್‌ ಫೇಸ್‌ಪ್ಯಾಕ್ ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳಿ. ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಿ.

ಏನೆಲ್ಲಾ ಬೇಕು..?
ನಿಂಬೆ ಹಣ್ಣು  1
ಅರಿಶಿಣ ಪುಡಿ
ಲೋಳೆರಸ
ಟೊಮೆಟೊ 1

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವುದು ಹೇಗೆ..?

ನಿಂಬೆರಸ, ಟೊಮೆಟೊ ರಸ, ಅರಿಶಿಣ ಪುಡಿ, ಲೋಳೆಸರ ಹಾಕಿ ಮಿಕ್ಸ್ ಮಾಡಿ. ನಂತರ ಅದನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ 20 ನಿಮಿಷ ಬಿಡಿ. ನಂತರ ಹತ್ತಿಯ ಉಂಡೆಯನ್ನು ನೀರಿನಲ್ಲಿ ಅದ್ದಿ ಮುಖವನ್ನು ಒರೆಸಿ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 1-2 ಬಾರಿ ಮಾಡುತ್ತಾ ಬಂದರೆ ಮುಖದ ಹೊಳಪು ಹೆಚ್ಚುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular