HomeEntertainmentಸ್ನೇಹಿತರ ದಿನಾಚರಣೆಗೆ ಹೊಸ ಪೋಸ್ಟರ್ ಹಂಚಿಕೊಂಡ 'ಬಾನ ದಾರಿಯಲ್ಲಿ' ಚಿತ್ರತಂಡ

ಸ್ನೇಹಿತರ ದಿನಾಚರಣೆಗೆ ಹೊಸ ಪೋಸ್ಟರ್ ಹಂಚಿಕೊಂಡ ‘ಬಾನ ದಾರಿಯಲ್ಲಿ’ ಚಿತ್ರತಂಡ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಕೊನೆಯ ಹಂತದಲ್ಲಿದ್ದಾರೆ. ಬಾನ ದಾರಿಯಲ್ಲಿ ಚಿತ್ರತಂಡ ಇಂದು ಸ್ನೇಹಿತರ ದಿನಾಚರಣೆಯ ಪ್ರಯುಕ್ತ ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಸ್ನೇಹಿತರ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ರೋಮ್ಯಾಂಟಿಕ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ರೇಷ್ಮಾ ನಾಣಯ್ಯ, ರುಕ್ಮಿಣಿ ವಸಂತ್, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಶ್ರೀ ವಾರೆ ಟಾಕೀಸ್ ಲಾಂಛನದಲ್ಲಿ ನಿರ್ಮಾಣ ಮಾಡಲಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular