HomeKarnatakaಸೋಲು ವೈಯಕ್ತಿಕ ನಷ್ಟವೇ ಹೊರತು ನಮ್ಮ ಸಿದ್ಧಾಂತಕ್ಕಲ್ಲ: ಸಿ.ಟಿ. ರವಿ ಅಭಿಪ್ರಾಯ

ಸೋಲು ವೈಯಕ್ತಿಕ ನಷ್ಟವೇ ಹೊರತು ನಮ್ಮ ಸಿದ್ಧಾಂತಕ್ಕಲ್ಲ: ಸಿ.ಟಿ. ರವಿ ಅಭಿಪ್ರಾಯ

ಹಿಂದುತ್ವ ಪ್ರತಿಪಾದನೆಯ ಪ್ರಮುಖ ನಾಯಕರಾಗಿರುವ ಸಿ.ಟಿ. ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಕಾಡೆ ಮಲಗಿದ್ದಾರೆ. ನಾಲ್ಕು ಬಾರಿ ಬಿಜೆಪಿ ಶಾಸಕರಾಗಿದ್ದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ನ ಎಚ್‌ಡಿ ತಮ್ಮಯ್ಯ ವಿರುದ್ಧ 7,500 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ.

ತಮ್ಮ ಸೋಲನ್ನು ಸ್ವೀಕರಿಸಿರುವ ಅವರು, “ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಬಿಜೆಪಿ ಚಿಕ್ಕಮಗಳೂರು ಕಾರ್ಯಕರ್ತರು ಮತ್ತು ಚಿಕ್ಕಮಗಳೂರಿನ ಜನತೆಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಎಲ್ಲಾ ವಿಜೇತ ಅಭ್ಯರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಮುಂಬರುವ ದಿನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇನೆ “ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ಇಂದಿನ ವಿಧಾನಸಭಾ ಚುನಾವಣೆಯಲ್ಲಿನ ಸೋಲು ನಮ್ಮ ವೈಯಕ್ತಿಕ ನಷ್ಟವೇ ಹೊರತು ನಮ್ಮ ಸಿದ್ಧಾಂತಕ್ಕಲ್ಲ, ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಮತ್ತು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಸುವರ್ಣ ಕರ್ನಾಟಕ ನಿರ್ಮಾಣದ ನಮ್ಮ ಪ್ರಯತ್ನ ಮುಂದುವರಿಯುತ್ತದೆ. ನಮಗೆ ನೀಡಿದ ಎಲ್ಲ ಬೆಂಬಲಕ್ಕಾಗಿ ನಾನು ಕನ್ನಡಿಗರಿಗೆ ಧನ್ಯವಾದಗಳು.” ಎಂದು ಟ್ವೀಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಕೀಯವಾಗಿ ಪ್ರಭಾವಿಯಾಗಿರುವ ಒಕ್ಕಲಿಗ ಸಮುದಾಯದ ಬಿಜೆಪಿ ನಾಯಕ ಸಿ.ಟಿ. ರವಿ ಕರ್ನಾಟಕದ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರು.

For Latest News Updates, Join Our Whatsapp Community🚩
RELATED ARTICLES

Most Popular