HomeKarnatakaಸಿ.ಎಂ. ಇಬ್ರಾಹಿಂ ಮೇಲೆ ನೋಟಿನ ಕಂತೆ ತೂರಿದ ಜೆಡಿಎಸ್ ಕಾರ್ಯಕರ್ತ...!

ಸಿ.ಎಂ. ಇಬ್ರಾಹಿಂ ಮೇಲೆ ನೋಟಿನ ಕಂತೆ ತೂರಿದ ಜೆಡಿಎಸ್ ಕಾರ್ಯಕರ್ತ…!

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಸಮಾವೇಶ ಒಂದರಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮೇಲೆ ಪಕ್ಷದ ಕಾರ್ಯಕರ್ತ ನೋಟಿನ ಕಂತೆ ತೂರಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶದ ಮೆರವಣಿಗೆಯಲ್ಲಿ ಸಿ.ಎಂ. ಇಬ್ರಾಹಿಂ ಹಾಗೂ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಪಾಲ್ಗೊಂಡಿದ್ದರು.

ಈ ವೇಳೆ ಸಂಗಮ ಟಾಕೀಸ್ ಬಳಿ ತೆರೆದ ವಾಹನದಲ್ಲಿದ್ದ ಇವರ ಮೇಲೆ ಕಾರ್ಯಕರ್ತರೊಬ್ಬರು 10, 20 ಹಾಗೂ 50 ರೂಪಾಯಿ ಮುಖಬೆಲೆಯ 2 ನೋಟಿನ ಕಂತೆಗಳನ್ನು ತೂರಿದ್ದು, ಇವುಗಳನ್ನು ಆರಿಸಿಕೊಳ್ಳಲು ಕೆಲವರು ಮುಗಿಬಿದ್ದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular