HomeEntertainment'ಸಿನಿಮಾ'ದಲ್ಲಿ ಚಾನ್ಸ್ ಕೊಡುವುದಾಗಿ ಅತ್ಯಾಚಾರ: ನಿರ್ಮಾಪಕ ಅರೆಸ್ಟ್

‘ಸಿನಿಮಾ’ದಲ್ಲಿ ಚಾನ್ಸ್ ಕೊಡುವುದಾಗಿ ಅತ್ಯಾಚಾರ: ನಿರ್ಮಾಪಕ ಅರೆಸ್ಟ್

ಬೆಂಗಳೂರು: ತಾನು ನಿರ್ಮಾಣ ಮಾಡುವ ಸಿನಿಮಾಗಳಲ್ಲಿ ನಟನೆಗೆ ಅವಕಾಶ ಕೊಡುವುದಾಗಿ ನಂಬಿಸಿ, ಮಹಿಳೆಯಿಂದ 75 ಲಕ್ಷ ರೂಪಾಯಿ ಪಡೆದು ಲೈಂಗಿಕವಾಗಿ ಶೋಷಿಸಿದ ನಿರ್ಮಾಪಕನನ್ನು ಜ್ಞಾನಭಾರತಿ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಎಸ್. ಕುಮಾರ್ ಬಂಧಿತ ಆರೋಪಿ. ಎರಡು ವರ್ಷದ ಹಿಂದೆ ಪರಿಚಿತರೊಬ್ಬರ ಮೂಲಕ ಸಂತ್ರಸ್ತೆಗೆ ಕುಮಾರ್ ಪರಿಚಯವಾಗಿದ್ದು, ಚಲನಚಿತ್ರ ನಿರ್ಮಾಪಕ ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದ. ಆರೋಪಿ ‘ದಿ ಕಲರ್ಸ್ ಆಫ್ ಟೊಮೆಟೊ’ ಸೇರಿದಂತೆ ಎರಡು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇದರಲ್ಲಿ ನಿಮಗೆ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ, ಸಂತ್ರಸ್ತೆಯಿಂದ ಸಾಲವಾಗಿ 75 ಲಕ್ಷ ರೂ. ಪಡೆದುಕೊಂಡಿದ್ದು, ಕ್ರಮೇಣ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಾನೆ. ಅತ್ಯಾಚಾರ ಕುರಿತಾಗಿ ಯಾರಿಗಾದರೂ ಹೇಳಿದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈತನ ಹಿಂಸೆ ತಾಳದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಜ್ಞಾನಭಾರತಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular