HomeKarnatakaಸಿಎಂ ಆಸೆ ಇಟ್ಟುಕೊಂಡಿರುವವರು ಆಗಲಿ; ನಾನೂ ಸಿಎಂ ಹುದ್ದೆಗೆ ಅರ್ಹ ಆದ್ರೆ ರೇಸ್ ನಲ್ಲಿಲ್ಲ ಎಂದ...

ಸಿಎಂ ಆಸೆ ಇಟ್ಟುಕೊಂಡಿರುವವರು ಆಗಲಿ; ನಾನೂ ಸಿಎಂ ಹುದ್ದೆಗೆ ಅರ್ಹ ಆದ್ರೆ ರೇಸ್ ನಲ್ಲಿಲ್ಲ ಎಂದ ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದಿದೆ. ಬಿಜೆಪಿಯ ಇನ್ನೂ ಹಲವು ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಈ ಬಾರಿ ಬಿಜೆಪಿಗೆ 50-60 ಸ್ಥಾನ ಬಂದರೆ ಹೆಚ್ಚು. ವಿವಿಧ ಪಕ್ಷಗಳ ಮುಖಂಡರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಕರೆತಂದಿದ್ರು. ಆದರೆ ಬಿಜೆಪಿಯವರು ಈಗ ಪಕ್ಷ ತೊರೆಯುತ್ತಿದ್ದಾರೆ. ಬಿಜೆಪಿಯ ಇನ್ನೂ ಅನೇಕ ನಾಯಕರು ಕಾಂಗ್ರೆಸ್ ಸೇರ್ಪಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 120 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ನಾನೂ ಸೀನಿಯರ್. ನಾನೂ ಮುಖ್ಯಮಂತ್ರಿ ಹುದ್ದೆಗೆ ಅರ್ಹನಾಗಿದ್ದೇನೆ. ಆದರೆ ಸ್ಪರ್ಧೆಯಲ್ಲಿ ಇಲ್ಲ. ಸಿಎಂ ಆಸೆ ಇಟ್ಟುಕೊಂಡವರು ಆಗಲಿ. ನಮಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular