HomeAstroಸಾಲದಿಂದ ಮುಕ್ತಿ ಪಡೆಯಲು ಬುಧವಾರ ಈ ರೀತಿ ಮಾಡಿ ಗಣಪತಿಯ ಆರಾಧನೆ…

ಸಾಲದಿಂದ ಮುಕ್ತಿ ಪಡೆಯಲು ಬುಧವಾರ ಈ ರೀತಿ ಮಾಡಿ ಗಣಪತಿಯ ಆರಾಧನೆ…

ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವಿದ್ದರೂ ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ಕೆಲಸದಲ್ಲಿ ಶುಭ ಫಲ ಸಿಗುತ್ತದೆ ಎಂಬುದು ನಂಬಿಕೆ. ವಿಧಿವಿಧಾನಗಳ ಪ್ರಕಾರ ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಇದೇ ಕಾರಣಕ್ಕೆ ಗಣಪನನ್ನು ವಿಘ್ನ ನಿವಾರಕ ಎಂದೂ ಕರೆಯುತ್ತಾರೆ.

ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ನಾವು ಹಣದ ಕೊರತೆಯನ್ನು ಎದುರಿಸುತ್ತೇವೆ, ಅಥವಾ ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಬುಧವಾರ ಗಣೇಶನ ಆರಾಧನೆ ಮಾಡಬೇಕು. ಬುಧವಾರ ಋಣಹರ್ತ ಗಣೇಶ ಸ್ತೋತ್ರವನ್ನು ಪಠಿಸುವುದು ಬಹಳ ಮಂಗಳಕರ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾರು ಈ ಸ್ತೋತ್ರವನ್ನು ಭಕ್ತಿ ಮತ್ತು ನಂಬಿಕೆಯಿಂದ ಪಠಿಸುತ್ತಾರೋ ಅವರ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಅವರು ಸಾಲದಿಂದ ಕೂಡ ಮುಕ್ತರಾಗುತ್ತಾರೆ. ಈ ಸ್ತೋತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳು ಅಂಗಡಿಗಳಲ್ಲಿ ಲಭ್ಯವಿವೆ. ಇಂಟರ್ನೆಟ್‌ನಲ್ಲಿ ಕೂಡ ರಣಹರ್ತಾ ಗಣೇಶ ಸ್ತೋತ್ರ ಲಭ್ಯವಿದ್ದು, ಅದನ್ನು ಬುಧವಾರ ಪಠಣ ಮಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular