HomeLatest Newsಸವಿಯಾದ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಮಾಡುವ ವಿಧಾನ

ಸವಿಯಾದ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಮಾಡುವ ವಿಧಾನ

ಬಾಯಲ್ಲಿ ನೀರೂರಿಸುವ ಚಾಕಲೇಟ್ ನಿಂದ ಯಾವುದೇ ರೆಸಿಪಿ ಮಾಡಿದರು ಸಖತ್ ಆಗಿರುತ್ತದೆ. ಅದರಲ್ಲೂ ಕೊಬ್ಬರಿ ಜೊತೆ ಚಾಕ್ಲೇಟ್ ಸವಿದರೆ ಅದರ ಟೇಸ್ಟೇ ಬೇರೆ. ಹಾಗಿದ್ದರೆ ಫಟಾಫಟ್ ಚಾಕ್ಲೇಟ್ ಕೊಬ್ಬರಿ ಮಿಠಾಯಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುರಿದ ತೆಂಗಿನಕಾಯಿ – 2 ಬಟ್ಟಲು
ಸಕ್ಕರೆ -1 ಬಟ್ಟಲು
ಕೋಕೋ ಪುಡಿ – 2 ಚಮಚ
ಹಾಲು – 2 ಚಮಚ
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ

ಮೊದಲು ತೆಂಗಿನಕಾಯಿ ತುರಿ, ಸಕ್ಕರೆ, ಹಾಲು, ಏಲಕ್ಕಿ ಪುಡಿ, ಕೋಕೋ ಪುಡಿ ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಹಾಕಿ 4 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಆ ಮಿಶ್ರಣವನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ನಂತರ ತಟ್ಟೆಗೆ ತುಪ್ಪ ಸವರಿ ಮಿಶ್ರಣ ಹರಡಿ ಸ್ವಲ್ಪ ಬಿಸಿ ಇರುವಾಗಲೇ ಚೌಕಾಕಾರವಾಗಿ ಕಟ್ ಮಾಡಬೇಕು. ನಂತರ ತಣ್ಣಗಾದ ಮೇಲೆ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular