HomeLatest News'ಸಮ್ಮರ್' ನಲ್ಲಿ ಕೂಲ್ ಕೂಲ್ ಅನುಭವಕ್ಕಾಗಿ ʼಕೋಲ್ಡ್ ಕಾಫಿʼ ಕುಡಿದು ನೋಡಿ

‘ಸಮ್ಮರ್’ ನಲ್ಲಿ ಕೂಲ್ ಕೂಲ್ ಅನುಭವಕ್ಕಾಗಿ ʼಕೋಲ್ಡ್ ಕಾಫಿʼ ಕುಡಿದು ನೋಡಿ

ಕಾಫಿ ಎಲ್ಲರಿಗೂ ಅಚ್ಚುಮೆಚ್ಚು. ಕಾಫಿ ಅಂದರೆ ಬಿಸಿಬಿಸಿ ಕುಡಿಯಬೇಕಪ್ಪಾ….. ಇಲ್ಲವಾದರೆ ಕುಡಿಯಲು ಸಾಧ್ಯವಿಲ್ಲ ಅನ್ನೋರೇ ಹೆಚ್ಚು. ಆದ್ರೆ ಇದೀಗ ಸ್ಪೆಷಲ್ಲಾಗಿ ಬೇಸಿಗೆ ಕಾಲಕ್ಕೆ ಕೋಲ್ಡ್ ಕಾಫಿ ಟೇಸ್ಟ್ ಮಾಡಿ.

ಈ ಹಾಟ್ ಹಾಟ್ ಸಮ್ಮರ್ ಗೆ ಬಿಸಿ ಕಾಫಿ ಕುಡಿಯಲಾಗುವುದಿಲ್ಲ ಅನ್ನುವವರು ಕೋಲ್ಡ್ ಕಾಫಿ ಆಯ್ಕೆ ಮಾಡಿಕೊಳ್ಳಬಹುದು. ಇದು ಕೂಡ ಬಿಸಿ ಕಾಫಿ ಅಷ್ಟೇ ರುಚಿ ಮತ್ತು ಪರಿಮಳ ಹೊಂದಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಕಿದ್ದರೆ ಐಸ್ ಕ್ಯೂಬ್ ಗಳನ್ನು ಹಾಕಿಕೊಳ್ಳಬಹುದು. ಈ ಕೋಲ್ಡ್ ಕಾಫಿ ಕುಡಿಯುವುದರಿಂದ ಕೂಲ್ ಅನುಭವ ಸಿಗುವುದರ ಜೊತೆಗೆ ಕಾಫಿ ಕುಡಿದ ಉಲ್ಲಾಸವೂ ಇರುತ್ತದೆ.

ಕೋಲ್ಡ್ ಕಾಫಿ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳಿವೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಗ್ಯಾಸ್ಟಿಕ್ ಸಮಸ್ಯೆ ಇದ್ದವರು ಈ ಕಾಫಿ ಕುಡಿಯುವುದು ಉತ್ತಮ.

ಕೋಲ್ಡ್ ಕಾಫಿಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು

ಬ್ಲೆಂಡರ್ ಜಾರ್ ಗೆ ಐಸ್ ಕ್ಯೂಬ್, ಕಾಫಿ ಡಿಕಾಕ್ಷನ್, ಹಾಲು, ಜೇನುತುಪ್ಪ, ಕ್ರೀಂ ಮತ್ತು 2 ಟೇಬಲ್ ಸ್ಪೂನ್ ಐಸ್ ಕ್ರೀಮ್ ಹಾಕಿ ಬ್ಲೆಂಡ್ ಮಾಡಿ. ಇದನ್ನು ಗ್ಲಾಸ್ ಗೆ ಸುರಿದು ಒಂದೆರಡು ಐಸ್ ಕ್ಯೂಬ್ಸ್, ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಂ, ಚಾಕಲೇಟ್ ಸಿರಪ್ ಮತ್ತು ಡ್ರೈ ಫ್ರೂಟ್ಸ್ ತುಣುಕುಗಳನ್ನು ಉದುರಿಸಿ ಕೋಲ್ಡ್ ಕಾಫಿ ಸಿಪ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular