ಸಚಿವ ಶ್ರೀರಾಮುಲುಗೆ ಮುತ್ತಿಕ್ಕಿ ಆಲಂಗಿಸಿದ ಸಂತೋಷ್ ಲಾಡ್…! ಬದ್ಧ ರಾಜಕೀಯ ವೈರಿಗಳ ನಡೆಯಿಂದ ಕೈ – ಬಿಜೆಪಿ ಕಾರ್ಯಕರ್ತರಿಗೆ ಅಚ್ಚರಿ….!!

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರು ಮಿತ್ರರೂ ಅಲ್ಲ ಎಂಬ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎದುರಾಳಿ ವಿರುದ್ಧ ಇಂದು ಕಿಡಿ ಕಾರುತ್ತಿದ್ದವರು ಮರುದಿನವೇ ಹಾಡಿ ಹೊಗಳುತ್ತಾರೆ. ಇಂತಹ ಹಲವು ಬೆಳವಣಿಗೆಗಳನ್ನು ಈಗಾಗಲೇ ಎಲ್ಲರೂ ನೋಡಿದ್ದಾರೆ

ಇದೀಗ ಮತ್ತೊಂದು ಇಂತಹದೇ ಘಟನೆ ಗಣಿ ನಾಡಿನಲ್ಲಿ ನಡೆದಿದೆ. ರಾಜಕೀಯ ಬದ್ಧ ವೈರಿಗಳೆಂದೇ ಹೇಳಲ್ಪಡುವ ಶ್ರೀರಾಮುಲು ಹಾಗೂ ಸಂತೋಷ್ ಲಾಡ್ ಆತ್ಮೀಯವಾಗಿ ನಡೆದುಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಸಂಡೂರಿನ ಬನ್ನಿಹಟ್ಟಿ ಜಾತ್ರೆಯಲ್ಲಿ ಈ ಇಬ್ಬರೂ ನಾಯಕರುಗಳು ಪಾಲ್ಗೊಂಡಿದ್ದು, ಕೈ ಮುಖಂಡ ಸಂತೋಷ್ ಲಾಡ್ ಸಚಿವ ಶ್ರೀರಾಮುಲು ಅವರಿಗೆ ಮುತ್ತಿಕ್ಕಿ ಆಲಂಗಿಸಿಕೊಂಡಿದ್ದಾರೆ. ಇವರಿಬ್ಬರ ಆತ್ಮೀಯತೆಯನ್ನು ಕಂಡು ಕೈ – ಬಿಜೆಪಿ ಕಾರ್ಯಕರ್ತರು ಕೆಲ ಹೊತ್ತು ಶಾಕ್ ಗೆ ಒಳಗಾದರೂ ಸಹ ಬಳಿಕ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read