ಸಂಭಾವನೆಯಲ್ಲಿ ಸಲ್ಮಾನ್‌, ಶಾರುಖ್‌ರನ್ನೂ ಹಿಂದಿಕ್ಕಿದ್ದಾರೆ ಈ ನಟ; ಸಿನೆಮಾದ ಬಜೆಟ್‌ ಅನ್ನೇ ಮೀರಿಸುವಂತಿದೆ ದಕ್ಷಿಣದ ಸೂಪರ್‌ ಸ್ಟಾರ್‌ ಪಡೆದಿರೋ ಶುಲ್ಕ….!

ಚಿತ್ರರಂಗದ ಎಲ್ಲಾ ಸ್ಟಾರ್‌ಗಳು ತಮ್ಮ ಐಷಾರಾಮಿ ಜೀವನ ಶೈಲಿ ಮತ್ತು ಸಿನೆಮಾಗಳಿಂದಲೇ ಜನರನ್ನು ಸೆಳೆಯುತ್ತಾರೆ. ಇವರ ಅದ್ಧೂರಿ ಬದುಕಿಗೆ ಕಾರಣ ಅವರು ಪಡೆಯೋ ಕೋಟಿ ಕೋಟಿ ಸಂಭಾವನೆ. ನಟರಾದ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌ ಸೇರಿದಂತೆ ಅನೇಕರು ಚಿತ್ರವೊಂದಕ್ಕೆ ಕೋಟಿಗಟ್ಟಲೆ ಶುಲ್ಕ ವಿಧಿಸುತ್ತಾರೆ. ಕೆಲವರ ಸಂಭಾವನೆಯಂತೂ ಇಡೀ ಸಿನೆಮಾದ ಬಜೆಟ್‌ಗೆ ಸರಿಸಮಾನವಾಗಿರುತ್ತದೆ.

ಆದರೆ ಅತಿ ಹೆಚ್ಚು ಸಂಭಾವನೆ ಪಡೆಯೋ ನಟರು ಯಾರು ಗೊತ್ತಾ ? ಸಲ್ಮಾನ್‌ ಹಾಗೂ ಶಾರುಖ್‌ ಅಲ್ಲ. ಈ ಪಟ್ಟಿಯಲ್ಲಿ ನಂಬರ್‌ ವನ್‌ ಸ್ಥಾನದಲ್ಲಿರೋದು ದಕ್ಷಿಣದ ಸೂಪರ್‌ ಸ್ಟಾರ್‌. ಸಂಭಾವನೆ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ತಮಿಳಿನ ಖ್ಯಾತ ನಟ ವಿಜಯ್‌.

ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ವಿಜಯ್ ಇದುವರೆಗೆ 66 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ತಮ್ಮ ಮುಂದಿನ ಚಿತ್ರ ‘ತಲಪತಿ 68’ ಗಾಗಿ ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.  ಇದು ಅವರ ವೃತ್ತಿ ಜೀವನದ 68ನೇ ಸಿನಿಮಾ.

ವಿಜಯ್ ನಟನೆಯ ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸಲಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ವಿಜಯ್ ತಮ್ಮ ಮೊದಲ ಸಿನಿಮಾಗೆ ಕೇವಲ 500 ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಈಗ ಎಲ್ಲಾ ಘಟಾನುಘಟಿ ತಾರೆಗಳನ್ನೂ ಹಿಂದಿಕ್ಕಿದ್ದಾರೆ. ಭಾರೀ ಸಂಭಾವನೆ ಪಡೆಯುವ ಮೂಲಕ ನಟ ವಿಜಯ್‌ ಬಾಲಿವುಡ್‌ ಸ್ಟಾರ್‌ಗಳಾದ ಶಾರುಖ್ ಖಾನ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್‌ರನ್ನು ಹಿಂದಿಕ್ಕಿದ್ದಾರೆ. ತೆಲುಗಿನ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಕೂಡ ವಿಜಯ್‌ಗೆ ಟಕ್ಕರ್‌ ಕೊಡಲು ಸಾಧ್ಯವಾಗಿಲ್ಲ. ವಿಜಯ್‌ ಅಭಿನಯದ ಹೊಸ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದ್ದು ಅಭಿಮಾನಿಗಳು ಬಿಡುಗಡೆಗಾಗಿ ಕಾಯ್ತಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read