
ಇಂತಹದೊಂದು ಘಟನೆ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಬಳಗನೂರು ಗ್ರಾಮದಲ್ಲಿ ಶನಿವಾರ ನಡೆದಿದ್ದು, ತೆಗ್ಗಿಹಳ್ಳಿಯ 25 ವರ್ಷದ ಸತೀಶ ಕಡಣಿ ಎಂಬಾತ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತುಕೊಂಡಿದ್ದ.
ಅಷ್ಟೇ ಅಲ್ಲ, ಈತ ಮೈ ಮೇಲಿನ ಬಟ್ಟೆ ಬಿಚ್ಚಿದ್ದು, ಯುವಕನ ಹುಚ್ಚಾಟ ನೋಡಿದ ಗ್ರಾಮಸ್ಥರು ಕೆಳಗಿಳಿದು ಬರುವಂತೆ ಕೂಗಿದ್ದಾರೆ. ಯಾವುದೇ ಪ್ರಯೋಜನವಾಗದಿದ್ದಾಗ ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದು, ಅವರು ಬಂದರೂ ಸಹ ಆತ ಇಳಿದು ಬಂದಿಲ್ಲ. ಕೊನೆಗೆ ಎಲ್ಲರೂ ಸೇರಿ ಕೆಳಗಿಳಿದು ಬಂದರೆ ನಿನಗೆ ಮತ್ತಷ್ಟು ಮದ್ಯ ಕುಡಿಸುವುದರ ಜೊತೆಗೆ ಗುಟ್ಕಾ ನೀಡುತ್ತೇವೆ ಎಂದಾಗ ಭೂಪ ಇಳಿದು ಬಂದಿದ್ದಾನೆ.

