ಬೆಂಗಳೂರು: ಬೆಂಗಳೂರು ಹೊರವಲಯದ ಸಿಂಗರಹಳ್ಳಿಯ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಆಂಧ್ರ ಎದುರು ದೆಹಲಿ ತಂಡ 4 ವಿಕೆಟ್ ಗಳ ಜಯಗಳಿಸಿದೆ.
ಟಾಸ್ ಗೆದ್ದ ದೆಹಲಿ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ರಿಕೀ ಭುಯಿ ಅವರ 122 ರನ್ ಗಳ ನೆರವಿನಿಂದ ಆಂಧ್ರ ತಂಡ ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 298 ರನ್ ಕಲೆ ಹಾಕಿತು.
12 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ಮರಳಿದ ವಿರಾಟ್ ಕೊಹ್ಲಿ 101 ಎಸೆತಗಳಲ್ಲಿ 14 ಬೌಂಡರಿ ಮೂರು ಸಿಕ್ಸರ್ ಸಹಿತ 131 ರನ್ ಗಳಿಸಿದರು. ನಿತೀಶ್ ರಾಣಾ 77 ರನ್ ಗಳಿಸಿದರು. 37.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದ ದೆಹಲಿ ನಾಲ್ಕು ವಿಕೆಟ್ ಗಳ ಜಯ ತನ್ನದಾಗಿಸಿಕೊಂಡಿದೆ.

