HomeIndiaವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡಿದ ಭೂಪ....!

ವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡಿದ ಭೂಪ….!

ಬಸ್, ರೈಲು ಮತ್ತು ವಿಮಾನದಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಇಷ್ಟಾದರೂ ಕೂಡ ಕೆಲವರು ಕದ್ದು ಮುಚ್ಚಿ ಸೇದುವುದುಂಟು. ಇಲ್ಲೊಬ್ಬ ಭೂಪ ಹಾರುತ್ತಿದ್ದ ವಿಮಾನದೊಳಗೆ ಧೂಮಪಾನ ಮಾಡಿ ಈಗ ಸಿಕ್ಕಿಬಿದ್ದಿದ್ದಾನೆ.

ಹೌದು, ಜನವರಿ 29ರಂದು ಈ ಘಟನೆ ನಡೆದಿದ್ದು, ಕೇರಳದ ಕೊಚ್ಚಿಯಲ್ಲಿ ಬಂದಿಳಿದ ಸ್ಪೈಸ್ ಜೆಟ್ ವಿಮಾನದ ಶೌಚಾಲಯದೊಳಗೆ ಸುಕುಮಾರನ್ ಎಂಬಾತ ಧೂಮಪಾನ ಮಾಡಿದ್ದಾನೆ.

62 ವರ್ಷದ ಸುಕುಮಾರನ್ ತ್ರಿಶೂರ್ ನಿವಾಸಿ ಎನ್ನಲಾಗಿದ್ದು, ಈತ ಶೌಚಾಲಯದೊಳಗೆ ಧೂಮಪಾನ ಮಾಡಿರುವುದು ಗೊತ್ತಾಗುತ್ತಿದ್ದಂತೆ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular