‘ಲಿಂಬು ಗೊಜ್ಜು’ ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ

ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ ಇಟ್ಟು ತಿನ್ನಬಹುದಾಗಿದೆ. ಬಾಣಂತಿಯರಿಗೆ ಉತ್ತಮ ಪೌಷ್ಟಿಕ ಆಹಾರ ಇದಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಟ್ಟು ಸೇವಿಸುತ್ತಾರೆ. ಇದನ್ನು ಹೇಗೆ ತಯಾರಿಸುವುದು ಅಂತ ನೋಡೋಣ.

ಬೇಕಾಗುವ ಸಾಮಾಗ್ರಿಗಳು

ದೊಡ್ಡಗಾತ್ರದ ನಿಂಬೆಹಣ್ಣುಗಳು 30
ಹವೀಜ 5 ಗ್ರಾಂ
ಚಕ್ಕೆ 5 ಗ್ರಾಂ
ಲವಂಗ 5 ಗ್ರಾಂ
ಸಹ ಜೀರಿಗೆ 5 ಗ್ರಾಂ
ಜೀರಿಗೆ 5 ಗ್ರಾಂ
ಕಾಳುಮೆಣಸು 5 ಗ್ರಾಂ
ಮೆಂತೆಕಾಳು 10 ಗ್ರಾಂ
ಕರಿಬೇವು 4 ಎಲೆಗಳ ಎಸಳು
ಒಳ್ಳೆಣ್ಣೆ 25 ಗ್ರಾಂ
ಬೆಳ್ಳುಳ್ಳಿ 50 ಗ್ರಾಂ
ಖಾರ ಪುಡಿ 10 ಗ್ರಾಂ
ಬೆಲ್ಲ 200 ಗ್ರಾಂ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಲಿಂಬೆ ಹಣ್ಣನ್ನು ಉಪ್ಪಿನಕಾಯಿ ಹೋಳುಗಳಂತೆ ಕತ್ತರಿಸಿಕೊಂಡು ಸಿದ್ಧ ಮಾಡಿಡಬೇಕು. ನಂತರ ಕತ್ತರಿಸಿದ ಪ್ರತಿ ಲಿಂಬೆಯಿಂದ ರಸವನ್ನು ಬೀಜದಿಂದ ಬೇರ್ಪಡಿಸಿ ಶೇಖರಿಸಿಟ್ಟುಕೊಳ್ಳಬೇಕು.

ನಂತರ ಮೆಂತ್ಯೆ ಕಾಳು, ಹವೀಜ, ಚಕ್ಕೆ, ಸಹ ಜೀರಿಗೆ, ಜೀರಿಗೆ, ಲವಂಗ, ಕಾಳುಮೆಣಸು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಬೇಕು.

ಹುರಿದಿಟ್ಟುಕೊಂಡ ಎಲ್ಲಾ ಮಸಾಲೆ ಸಾಮಾಗ್ರಿಗಳನ್ನು ಗ್ರೈಂಡರ್ ಸಹಾಯದಿಂದ ಸಣ್ಣ ಹುಡಿಯಾಗಿ ಮಾಡಿಟ್ಟುಕೊಳ್ಳಬೇಕು. ನಂತರ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎಣ್ಣೆಯನ್ನು ಹಾಕಿ ಒಗ್ಗರಣೆ ಮಾಡಬೇಕು.

ಒಗ್ಗರಣೆಯಲ್ಲಿ ಮೊದಲು ಕರಿಬೇವು, ನಂತರ ಬೆಳ್ಳುಳ್ಳಿ, ನಂತರ ಪುಡಿ ಮಾಡಿದ ಮಸಾಲೆಯನ್ನು ಟೇಬಲ್ ಸ್ಪೂನ್ ನಿಂದ 5 ಚಮಚದಷ್ಟು ಮತ್ತು ಖಾರ ಪುಡಿಯನ್ನು ಹಾಕಬೇಕು.

ಕೂಡಲೇ ಸೋಸಿ ತೆಗೆದಿರಿಸಿದ ಲಿಂಬೆಹಣ್ಣಿನ ರಸವನ್ನು ಇದೇ ಒಗ್ಗರಣೆ ಹಾಕಿದ ಬಾಣಲಿಗೆ ಸುರಿಯಬೇಕು. ಇದು ಕುದಿಯಲು ಪ್ರಾರಂಭಿಸಿದಾಗ ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ಬಾಣಲೆಯನ್ನು ಕೆಳಗಿಳಿಸಬೇಕು. ಈಗ ಲಿಂಬೆ ಗೊಜ್ಜು ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read