HomeAgricultureರೈತರಿಗೆ ಮುಖ್ಯ ಮಾಹಿತಿ : ಕೃಷಿ ಭಾಗ್ಯ ಯೋಜನೆಯಡಿ ನೋಂದಣಿಗೆ ಅರ್ಜಿ ಆಹ್ವಾನ

ರೈತರಿಗೆ ಮುಖ್ಯ ಮಾಹಿತಿ : ಕೃಷಿ ಭಾಗ್ಯ ಯೋಜನೆಯಡಿ ನೋಂದಣಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ಕೃಷಿ ಭಾಗ್ಯಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕು ವ್ಯಾಪ್ತಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಕೃಷಿ ಭಾಗ್ಯಯೋಜನೆಯು ಕೇವಲ ಮಳೆಯಾಶ್ರಿತ ಪ್ರದೇಶಕ್ಕೆ ಸೀಮಿತವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕೃಷಿ ಭಾಗ್ಯಯೋಜನೆಯನ್ನು ಅಚ್ಚುಕಟ್ಟು ಪ್ರದೇಶಕಕ್ಕೂ ವಿಸ್ತರಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಭಾಗ್ಯಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.

ರೈತರು ಕೊಳವೆ ಬಾವಿಯ ಬದಲಾಗಿ ಹೂಡಿಕೆಯನ್ನು ಕೃಷಿ ಭಾಗ್ಯಯೋಜನೆಯ ಘಟಕಗಳಲ್ಲಿ ಮಾಡಿ ಸುಸ್ಥಿರ ಕೃಷಿಗಾಗಿ ಬಳಸಬಹುದು. ರೈತರು ಕೆಂಪು ಮಣ್ಣಿನಲ್ಲಿ ಕಡ್ಡಾಯವಾಗಿ ಟಾರ್ಪಲ್ ಹೊದಿಕೆ ಹಾಗೂ ತಂತಿ ಬೇಲಿಯನ್ನು ಎಲ್ಲಾ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಕೃಷಿ ಹೊಂಡ ಮಾಡಿಸಿಕೊಂಡ ಎಲ್ಲಾ ಫಲಾನುಭವಿಗಳಿಗೆ ಕ್ಷೇತ್ರ ಬದು, ಡಿಸೇಲ್ ಇಂಜನ್ ಹಾಗೂ ತುಂತುರು ನೀರಾವರಿ ಘಟಕಗಳಿಗೆ ಕೂಡ ಸಹಾಯಧನ ಲಭ್ಯವಿರುತ್ತದೆ.ಒಣ ಭೂಮಿ ರೈತರ ಆದಾಯ ಮಳೆಯ ಮೇಲೆ ಅವಲಂಬಿತವಾಗಿರುವುದರಿಂದ ನಿರೀಕ್ಷಿತ ಆದಾಯ ಸಿಗುವುದು ಕಷ್ಟಸಾಧ್ಯವಾಗಿದ್ದು, ರೈತರು ಕೃಷಿ ಭಾಗ್ಯಯೋಜನೆಯ ವಿವಿಧ ಘಟಕಗಳ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular