HomeLifestyleರುಚಿ ರುಚಿಯಾದ 'ಪನ್ನೀರ್' ಮೆಂತೆ ಸೊಪ್ಪಿನ ಪಲ್ಯ

ರುಚಿ ರುಚಿಯಾದ ‘ಪನ್ನೀರ್’ ಮೆಂತೆ ಸೊಪ್ಪಿನ ಪಲ್ಯ

ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು.

ಮೆಂತೆ ಹಾಗೂ ಪನ್ನೀರ್‌ ಎರಡೂ ತುಂಬಾ ಆರೋಗ್ಯಕರವಾದ ಆಹಾರವಾಗಿದ್ದು, ಇವೆರಡನ್ನು ಮಿಕ್ಸ್ ಮಾಡಿ ಮಾಡುವ ಪಲ್ಯದ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
ಪನ್ನೀರ್‌ – 200 ಗ್ರಾಂ
ಟೊಮೆಟೊ – 2
ಜೀರಿಗೆ – 1/2 ಚಮಚ
ಖಾರದ ಪುಡಿ – 1/2 ಚಮಚ
ಗರಂ ಮಸಾಲೆ ಪುಡಿ – 1/2 ಚಮಚ
ಎಣ್ಣೆ – 3 ಚಮಚ
ಮೆಂತೆ – 500 ಗ್ರಾಂ
ಶುಂಠಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿಣ ಪುಡಿ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ
ಮೆಂತೆ ಸೊಪ್ಪನ್ನು ಶುಚಿ ಮಾಡಿ, ತೊಳೆದು ಕತ್ತರಿಸಿ. ನಂತರ ಪನ್ನೀರ್‌ ಅನ್ನು ಕ್ಯೂಬ್‌ ರೀತಿಯಲ್ಲಿ ಕತ್ತರಿಸಿಡಿ.

ಈಗ ಪಾತ್ರೆಯನ್ನು ಬಿಸಿ ಮಾಡಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್‌ ಶಬ್ದ ಮಾಡುವಾಗ ಶುಂಠಿ, ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ. ಈಗ ಖಾರದಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.

ಈಗ ಪನ್ನೀರ್‌ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ಮೆಂತೆ ಸೊಪ್ಪು ಹಾಕಿ 5-7 ನಿಮಿಷ ಫ್ರೈ ಮಾಡಿದರೆ ಪನ್ನೀರ್‌ ಮೆಂತೆ ಸೊಪ್ಪಿನ ಪಲ್ಯ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular