ರಾಕಿ ಭಾಯ್‌ ಥಾಯ್ಲೆಂಡ್‌ ಗೆ ಹೋಗಿ ಬಂದಿದ್ದರ ಹಿಂದಿದೆಯಾ ಈ ಕಾರಣ ? ಅಭಿಮಾನಿಗಳಲ್ಲಿ ಕುತೂಹಲ

ನಟ ಯಶ್ ಸದ್ಯ ಕೆಜಿಎಫ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಾ ಅನ್ನೋ ಕುತೂಹಲ, ಪ್ರಶ್ನೆ ಇದ್ದೇ ಇದೆ. ಆದರೆ ಯಾವ ಅಧಿಕೃತ ವಿಚಾರವನ್ನೂ ರಾಕಿಭಾಯ್ ಎಲ್ಲೂ ಹಂಚಿಕೊಂಡಿಲ್ಲ. ಇದರ ಬೆನ್ನಲ್ಲೇ ಹಾಲಿವುಡ್ ತಂತ್ರಜ್ಞರನ್ನು ಯಶ್ ತಮ್ಮ ಮುಂದಿನ ಚಿತ್ರದಲ್ಲಿ ಬಳಸಿಕೊಳ್ಳಲಿದ್ದರಾ ಅನ್ನೊ ಪ್ರಶ್ನೆ ಕೂಡ ಎದ್ದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಥಾಯ್ಲೆಂಡ್ ಗೆ ಯಶ್ ಹೋಗಿ ಬಂದಿದ್ದಾರಂತೆ.

ಹೌದು, ಸದ್ದಿಲ್ಲದೆ ಈ ನಟ ವಿದೇಶಕ್ಕೆ ಹೋಗಿ ಬಂದಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಚಾರ್ಟೆಡ್ ಫ್ಲೈಟ್‌ನಲ್ಲಿ ರಾಕಿಭಾಯ್ ಥಾಯ್ಲೆಂಡ್‌ಗೆ ಹೋಗಿದ್ದರಂತೆ. ಯಶ್ ವಿದೇಶಕ್ಕೆ ಹೋಗಿ ಬಂದದ್ದು ಯಾರಿಗೂ ಗೊತ್ತಾಗಿಲ್ಲ. ಆದರೆ ಇತ್ತೀಚೆಗೆ ಕುಟುಂಬ ಸಮೇತ ದುಬೈನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡರು. ಕುಟುಂಬವನ್ನು ಕರ್ನಾಟಕಕ್ಕೆ ವಾಪಸ್ ಕಳಿಸಿದ ನಂತರ ಒಬ್ಭರೇ ಥಾಯ್ಲೆಂಡ್ ಗೆ ಹೋಗಿದ್ದರಂತೆ. ಏಕಾಂಗಿಯಾಗಿ ಚಾರ್ಟೆಡ್ ಫ್ಲೈಟ್‌ನಲ್ಲಿ ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ‌.

ಈ ಬೆಳವಣಿಗೆಗಳು ಆದಾಗಿನಿಂದ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿದೆ. ಹುಟ್ಟು ಹಬ್ಬಕ್ಕೆ ದುಬೈಗೆ ಹಾರಿದ್ದ ರಾಕಿ ಭಾಯ್ ಥಾಯ್ಲೆಂಡ್‌ಗೆ ಏಕೆ ಹೋಗಿರಬಹುದು ಎಂದು ಚರ್ಚೆ ಶುರುವಾಗಿದೆ‌. ಅದೇನೇ ಇರಲಿ ಅವರು ಯಾವುದೇ ಸಿನಿಮಾದಲ್ಲಿ ನಟಿಸಲಿ ಆದಷ್ಟು ಬೇಗ ತೆರೆ ಮೇಲೆ ಅವರು ಬರಲಿ ಅಂತಿದ್ದಾರೆ ಅಭಿಮಾನಿಗಳು.

Thumbnail image

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read