HomeKarnatakaಯುವತಿಯರನ್ನು ಚುಡಾಯಿಸುತ್ತಿದ್ದ ಮೂವರು ಯುವಕರು; ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿ BEFORE, AFTER ಎಫೆಕ್ಟ್...

ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರು ಯುವಕರು; ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿ BEFORE, AFTER ಎಫೆಕ್ಟ್ ಎಂದು ಫೋಸ್ಟ್ ಮಾಡಿ ಬುದ್ಧಿ ಕಲಿಸಿದ ಪೊಲೀಸರು

ಧಾರವಾಡ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರ ಗುಂಪಿಗೆ ಪೊಲೀಸರು ತಮ್ಮದೇ ರೀತಿಯಲ್ಲಿ ಬುದ್ಧಿ ಕಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಕಾಲೇಜೊಂದರ ಬಳಿ ಮೂವರು ಯುವಕರು, ಯುವತಿಯರನ್ನು ಚುಡಾಯಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಬೈಕ್ ನಲ್ಲಿ ತೆರಳುವಾಗ ವಿಚಿತ್ರವಾಗಿ ಧ್ವನಿ ಮಾಡುತ್ತಾ ಯುವತಿಯನ್ನು ಹೆದರಿಸುತ್ತ ಹುಚ್ಚಾಟ ಮೆರೆಯುತ್ತಿದ್ದರು. ಇದನ್ನು ಹಿಂದಿನಿಂದ ಮತ್ತೊಂದು ಬೈಕ್ ನಲ್ಲಿ ಯುವಕರ ಗೆಳೆಯರು ವಿಡಿಯೋ ಮಾಡುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯವನ್ನು ಯುವಕರು ಅಪ್ ಲೋಡ್ ಮಾಡಿದ್ದರು.

ಇದನ್ನು ಗಮನಿಸಿದ ಪೊಲೀಸರು ವೈರಲ್ ಆಗುತ್ತಿದ್ದ ಬೈಕ್ ಜಪ್ತಿ ಮಾಡಿ ಮೂವರು ಯುವಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಹ್ಮದ್ ಖಾತರ್, ಜುನೇದ್ ಸೌದಾಗರ್, ಮನ್ಸೂರ್ ವಿರುದ್ಧ ಧಾರವಾಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯುವಕ ಹುಚ್ಚಾಟ ಮತ್ತು ಕೇಸ್ ಹಾಕಿದ ಫೋಟೋಗಳನ್ನು ಸೇರಿಸಿ ವಿಡಿಯೋ ಮಾಡಿ ವೈರಲ್ ಆಗುವ ರೀತಿ BEFORE, AFTER ಎಫೆಕ್ಟ್ ಎಂದು ಟ್ವಿಟರ್ ನಲ್ಲಿ ಧಾರವಾಡ ನಗರ ಪೊಲೀಸರು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular