ಯಾವಾಗಲೂ ಅದೃಷ್ಟ ನಿಮ್ಮ ಜೊತೆಯಲ್ಲೇ ಇರಲು ಈ ʼಉಪಾಯʼ ಮಾಡಿ ನೋಡಿ

ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ, ಎಷ್ಟೇ ಉಪಾಯದಿಂದ ಕೆಲಸ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುವುದೇ ಇಲ್ಲ. ಆಗ ಆಗುವ ನೋವನ್ನು ಎದುರಿಸುವುದು ಸುಲಭದ ಮಾತಲ್ಲ. ಎಲ್ಲದಕ್ಕೂ ಲಕ್ ಇರಬೇಕು ಅಂತ ಹೇಳ್ತಾರಲ್ಲ. ಅಂತಹ ಲಕ್ ನಿಮ್ಮದಾಗಿಸಿಕೊಳ್ಳಲು ಜ್ಯೋತಿಷ್ಯದ ಕೆಲವು ಸರಳ ಮಾರ್ಗಗಳು ಇಲ್ಲಿವೆ.

ಅದೃಷ್ಟ ಕೈಕೊಟ್ಟಲ್ಲಿ ನಿತ್ಯ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಚಿಟಿಕೆ ಅರಿಶಿನ ಹಾಕಿ ಸ್ನಾನ ಮಾಡಿ. ಇದರಿಂದ ವಿಷ್ಣು ಮತ್ತು ಬ್ರಹಸ್ಪತಿಯ ಕೃಪೆ ನಿಮ್ಮ ಮೇಲಿರುತ್ತದೆ. ಸಂಜೆ ಸ್ನಾನ ಮಾಡುವುದಾದರೆ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಜೀವನದಲ್ಲಿ  ಕಷ್ಟವಿದ್ದರೆ ಪ್ರತಿ ಮಂಗಳವಾರ ಪಂಚಮುಖಿ ಹನುಮಂತನ ಆರಾಧನೆ ಮಾಡಿ. ಹನುಮಂತನಿಗೆ ದೀಪ ಹಚ್ಚಿ ಹನುಮಾನ ಚಾಲೀಸ ಓದಿ. ಇದರಿಂದ ಧನ ಲಾಭವಾಗುತ್ತದೆ ಮತ್ತು ಶತ್ರುವಿನ ಸಮಸ್ಯೆ ದೂರವಾಗುತ್ತದೆ.

ಶಾಸ್ತ್ರದಲ್ಲಿ ಮತ್ತು ವೈಜ್ಞಾನಿಕವಾಗಿಯು ಕೂಡ ತುಳಸಿಯ ಮುಂದೆ ದೀಪ ಹಚ್ಚುವುದು ಶುಭ ಎಂದು ಹೇಳಲಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.

ಮನೆಯಲ್ಲಿ ಪೂಜೆ ಮಾಡಿ ಶಂಖವನ್ನು ಊದಬೇಕು. ಪ್ರತಿದಿನ ಬೆಳಿಗ್ಗೆ, ಸಾಯಂಕಾಲ ಹೀಗೆ ಮಾಡಿದರೆ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಶಂಖ ಇಲ್ಲದಿರುವವರು ಗಂಟೆಯನ್ನು ಕೂಡ ಬಾರಿಸಬಹುದು.

ವಾಸ್ತು ಶಾಸ್ತ್ರದ ಪ್ರಕಾರ ನಿಂತ ಗಡಿಯಾರ ನಮ್ಮ ಭಾಗ್ಯವನ್ನು ಕೂಡ ನಿಲ್ಲಿಸುತ್ತದೆ. ಹಾಗಾಗಿ ಗಡಿಯಾರವನ್ನು ಸರಿ ಮಾಡಿಸಿ ಅಥವಾ ಅದನ್ನು ಮನೆಯಿಂದ ಹೊರಹಾಕಿ. ಹಾಗೆಯೇ ಮಂಚದ ಕೆಳಗೆ ಚಪ್ಪಲಿ ಅಥವಾ ಇನ್ಯಾವುದೋ ಕೆಲಸಕ್ಕೆ ಬಾರದ ವಸ್ತುಗಳನ್ನು ಇಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಮನೆಗೆ ಬರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read