HomeKarnatakaಮೊದಲ ಪಟ್ಟಿಯಲ್ಲೇ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ತಂದೆ - ಮಕ್ಕಳು....!

ಮೊದಲ ಪಟ್ಟಿಯಲ್ಲೇ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ತಂದೆ – ಮಕ್ಕಳು….!

 

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

 

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇಂದು 124 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಆರು ಮಂದಿ ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಟಿಕೆಟ್ ಸಿಕ್ಕಿದೆ. ಇದರ ಜೊತೆಗೆ ಕಡಿಮೆ ಆಕಾಂಕ್ಷಿಗಳಿದ್ದ ಕ್ಷೇತ್ರಗಳಿಗೂ ಹೆಸರು ಪ್ರಕಟಿಸಲಾಗಿದೆ.

ಇದರ ಮಧ್ಯೆ ಮೊದಲ ಪಟ್ಟಿಯಲ್ಲಿ ತಂದೆ – ಮಗ ಹಾಗೂ ತಂದೆ – ಮಗಳು ಟಿಕೆಟ್ ಪಡೆದಿರುವುದು ವಿಶೇಷ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಘೋಷಣೆಯಾಗಿದ್ದರೆ, ದಾವಣಗೆರೆ ಉತ್ತರದಿಂದ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಕೆ.ಎಚ್. ಮುನಿಯಪ್ಪ ಅವರಿಗೆ ದೇವನಹಳ್ಳಿ ಕ್ಷೇತ್ರದ ಟಿಕೆಟ್ ನೀಡಲಾಗಿದ್ದರೆ, ಕೆಜಿಎಫ್ ಕ್ಷೇತ್ರದಿಂದ ಅವರ ಪುತ್ರಿ ಎಂ. ರೂಪಕಲಾ ಅಭ್ಯರ್ಥಿಯಾಗಿದ್ದಾರೆ. ಹಾಗೆಯೇ ಬಿಟಿಎಂ ಲೇಔಟ್ ನಿಂದ ರಾಮಲಿಂಗ ರೆಡ್ಡಿ ಸ್ಪರ್ಧಿಸುತ್ತಿದ್ದು, ಜಯನಗರದಿಂದ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಇನ್ನು ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣಪ್ಪ ಸ್ಪರ್ಧಿಸುತ್ತಿದ್ದು, ಗೋವಿಂದರಾಜ ನಗರ ಕ್ಷೇತ್ರದಿಂದ ಅವರ ಪುತ್ರ ಪ್ರಿಯಾಕೃಷ್ಣ ಅಭ್ಯರ್ಥಿಯಾಗಿದ್ದಾರೆ. ಎರಡನೇ ಪಟ್ಟಿಯಲ್ಲೂ ಇದೇ ರೀತಿ ಕೆಲವರು ಟಿಕೆಟ್ ಪಡೆದುಕೊಳ್ಳುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular