HomeKarnatakaಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು

ಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು

ಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ 18 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮುಸುಕುಧಾರಿ ಕಳ್ಳ, ಕಳವು ಮಾಡಿಕೊಂಡು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಾಜಿ ಸಚಿವ ಎಂ. ಶಿವಣ್ಣ ಅವರಿಗೆ ಸೇರಿದ್ದ ಕಾರನ್ನು ಕಳವು ಮಾಡಲಾಗಿದ್ದು, ಅವರ ವಿಜಯನಗರ ಮನೆಯ ಮುಂದೆ ನಿಲ್ಲಿಸಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.

ಜೂನ್ 5 ರಂದು ಚಾಲಕ ರಘು ಕಾರು ನಿಲ್ಲಿಸಿ ಬೀಗವನ್ನು ಮನೆ ಸಹಾಯಕನ ಬಳಿ ಕೊಟ್ಟು ಹೋಗಿದ್ದು, ಮಾರನೇ ದಿನ ಬೆಳಿಗ್ಗೆ ಕಾರು ಅಲ್ಲಿರಲಿಲ್ಲ. ಸಿಸಿ ಟಿವಿ ಪರಿಶೀಲಿಸಿದ ವೇಳೆ ಅಪರಿಚಿತ ವ್ಯಕ್ತಿ ಮನೆಯೊಳಗೆ ಬಂದು ಕಾರಿನ ಕೀ ತೆಗೆದುಕೊಂಡು ಹೋಗಿರುವುದು ಸೆರೆಯಾಗಿದೆ. ಇದೀಗ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular