HomeKarnataka'ಮದುವೆ' ಮುರಿದು ಬಿದ್ದಿದ್ದಕ್ಕೆ ಮನನೊಂದ ಯುವಕ ಸಾವಿಗೆ ಶರಣು

‘ಮದುವೆ’ ಮುರಿದು ಬಿದ್ದಿದ್ದಕ್ಕೆ ಮನನೊಂದ ಯುವಕ ಸಾವಿಗೆ ಶರಣು

ನಿಶ್ಚಿತಾರ್ಥವಾಗಿದ್ದ ಮದುವೆ ಮುರಿದು ಬಿದ್ದಿದ್ದಕ್ಕೆ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕಿನ ಮಾಸೂರಿನ 26 ವರ್ಷದ ಅಣ್ಣಪ್ಪ ಮೃತಪಟ್ಟ ಯುವಕನಾಗಿದ್ದು, ಈತನ ವಿವಾಹ ವರ್ಷದ ಹಿಂದೆ ಇದೇ ತಾಲೂಕಿನ ಯುವತಿಯೊಂದಿಗೆ ನಿಶ್ಚಯವಾಗಿತ್ತು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಕೊನೆ ಕ್ಷಣದಲ್ಲಿ ಯುವತಿಯ ತಂದೆ ಈ ಮದುವೆ ಮಾಡಿಕೊಡಲು ನಿರಾಕರಿಸಿದ್ದು, ಇದರಿಂದ ಮನನೊಂದ ಅಣ್ಣಪ್ಪ ಮೇ 10ರಂದು ವಿಷ ಸೇವಿಸಿದ್ದರು. ಇವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular