HomeEntertainmentಮಗಳಿಗೆ ಬರೋಬ್ಬರಿ 35 ಕೋಟಿ ರೂ. ಬೆಲೆಯ ಐಷಾರಾಮಿ ಬಂಗಲೆ ನೀಡಿದ ಮೆಗಾಸ್ಟಾರ್ ಚಿರಂಜೀವಿ...!

ಮಗಳಿಗೆ ಬರೋಬ್ಬರಿ 35 ಕೋಟಿ ರೂ. ಬೆಲೆಯ ಐಷಾರಾಮಿ ಬಂಗಲೆ ನೀಡಿದ ಮೆಗಾಸ್ಟಾರ್ ಚಿರಂಜೀವಿ…!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕಿರಿಯ ಪುತ್ರಿ ಶ್ರೀಜಾ ಅವರಿಗೆ ಐಷಾರಾಮಿ ಬಂಗಲೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೈದರಾಬಾದಿನ ಪ್ರತಿಷ್ಠಿತ ಎಂಎಲ್ಎ ಕಾಲೋನಿಯಲ್ಲಿರುವ ಈ ಬಂಗಲೆಯ ಬೆಲೆ ಬರೋಬ್ಬರಿ 35 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.

ಶ್ರೀಜಾ ಮತ್ತೊಂದು ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಈ ಮದುವೆಗೆ ಉಡುಗೊರೆಯಾಗಿ ಚಿರಂಜೀವಿಯವರು ಬಂಗಲೆಯನ್ನು ನೀಡಿದ್ದಾರೆ ಎಂಬ ಮಾತುಗಳು ಚಿತ್ರರಂಗದ ವಲಯದಲ್ಲಿ ಕೇಳಿ ಬರುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ವಾಲ್ತೇರ್ ವೀರಯ್ಯ’ ಹಾಗೂ ‘ಭೋಲಾ ಶಂಕರ್’ ಚಿತ್ರಗಳಿಗೆ ತಾವು ಪಡೆದ ಸಂಭಾವನೆಯ ಮೂಲಕ ಚಿರಂಜೀವಿ ಎಂಎಲ್ಎ ಕಾಲೋನಿಯಲ್ಲಿರುವ ಮನೆ ಖರೀದಿಸಿದ್ದರು ಎನ್ನಲಾಗಿದೆ. ತಮ್ಮ ಪುತ್ರಿಯರಾದ ಸುಶ್ಮಿತಾ ಹಾಗೂ ಶ್ರೀಜಾ ಹೆಸರಿನಲ್ಲಿ ಚಿರಂಜೀವಿಯವರು ತೆಲಂಗಾಣದಲ್ಲಿ ಈಗಾಗಲೇ ಎಕರೆಗಟ್ಟಲೆ ಜಾಗ ಖರೀದಿಸಿದ್ದು, ಇದೀಗ ಮತ್ತೊಂದು ಐಷಾರಾಮಿ ಬಂಗಲೆ ಖರೀದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular