ಮಕ್ಕಳ ಕಳ್ಳರ ವದಂತಿ; ಯುವಕರಿಗೆ ಥಳಿಸಿ ಕಾರಿಗೆ ಬೆಂಕಿ

ಇಬ್ಬರು ಯುವಕರು ಕಾರಿನಲ್ಲಿ ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂಬ ವದಂತಿ ಮೊಬೈಲ್ ಮೂಲಕ ಹಬ್ಬಿದ್ದು, ಇದರ ಪರಿಣಾಮ ಕಾರು ಅಡ್ಡಗಟ್ಟಿದ ಹಲವರು ಯುವಕರನ್ನು ಥಳಿಸಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಶುಕ್ರವಾರದಂದು ಬಾಗಲಕೋಟೆ ಜಿಲ್ಲೆ ಖಜ್ಜಿಡೋಣಿ ಸೇತುವೆ ಬಳಿ ಈ ಘಟನೆ ನಡೆದಿದ್ದು, ಬಾಗಲಕೋಟೆಯ ಉದ್ಯಮಿಗಳ ಪುತ್ರರಾದ ರಾಹುಲ್, ಕಿರಣ ಕಾರಿನಲ್ಲಿ ಹೋಗುತ್ತಿದ್ದಾಗ ಐವತ್ತಕ್ಕೂ ಅಧಿಕ ಮಂದಿ ಇದ್ದ ಗುಂಪು ಅಡ್ಡಗಟ್ಟಿದೆ.

ಕಾರಿನಲ್ಲಿ ಯಾವುದೇ ಮಕ್ಕಳು ಇಲ್ಲದಿದ್ದರೂ ಸಹ ವದಂತಿಯನ್ನು ನಂಬಿ ಯುವಕರನ್ನು ಥಳಿಸಿ ಕಾರಿಗೆ ಬೆಂಕಿ ಹಚ್ಚಲಾಗಿದೆ. ಇದರ ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಮುಧೋಳ ತಾಲೂಕಿನ ಕೆ.ಡಿ. ಬುಡ್ನಿಯಿಂದ ಬರುತ್ತಿರುವ ಕಾರಿನಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿ ಹಬ್ಬಿದ್ದೇ ಈ ಘಟನೆಗೆ ಕಾರಣವೆಂದು ಹೇಳಲಾಗಿದ್ದು, ಅದೃಷ್ಟವಶಾತ್ ಪ್ರಕರಣ ಒಂದರ ತನಿಖೆಗಾಗಿ ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಲೋಕಾಪುರ ಠಾಣೆ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read