
ಕೊಟ್ರೆಪ್ಪ ಬಂಡಗಾರ (59) ಮೃತ ಪೊಲೀಸ್ ಕಾನ್ಸ್ ಟೇಬಲ್. ಮುಂಡರಗಿ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಕೊಟ್ರೆಪ್ಪ, ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಮುಂಡರಗಿಯ ಜಂತ್ಲಿ ಶಿರೂರ್ ನಿವಾಸಿಯಾಗಿರುವ ಕೊಟ್ರೆಪ್ಪ ಡಂಬಳಕ್ಕೆ ಕರ್ತವ್ಯ ನಿರ್ವಹಣೆಗೆ ಹೋಗಿದ್ದರು. ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

