ಬೆಂಗಳೂರು: ಬೆಂಗಳೂರಿನಲ್ಲಿ ಬೆಟ್ಟಿಂಗ್ ಚಟಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ಹೋಂ ಗಾರ್ಡ್ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬಟ್ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾದೇವಪುರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿದ್ದ ಮಂಜುಳಾ(32) ಕೊಲೆಯಾದವರು. ಅವರನ್ನು ಪತಿ ಪ್ರದೀಪ್ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ಪತ್ನಿ ಮಂಜುಳಾ ಅವರನ್ನು ಪ್ರದೀಪ್ ಕೊಲೆ ಮಾಡಿದ್ದು, ಕೃತ್ಯಕ್ಕೆ ಮೊದಲು ಕೊಲೆ ಮಾಡುವುದಾಗಿ ವಿಡಿಯೋ ಮಾಡಿದ್ದಾನೆ.
ಮಹದೇವಪುರದಲ್ಲಿ ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಕೊಲೆ ನಡೆದಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಮಂಜುಳಾ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿ ಪ್ರದೀಪ್ ಆ್ಯಪ್ ಗಳಲ್ಲಿ ಬೆಟ್ಟಿಂಗ್ ಚಟಕ್ಕೆ ಸಿಲುಕಿದ್ದ. ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ ಮಕ್ಕಳು ಬೀದಿಗೆ ಬಂದರು. ನಾನು ಸಾಯುತ್ತೇನೆ, ನನ್ನ ಪತ್ನಿಯೂ ಸಾಯುತ್ತಾಳೆ. ಅತ್ತೆ ಹಾಗೂ ನಾದಿನಿಯಿಂದ ನನ್ನ ಪತ್ನಿ ಮಂಜುಳಾ ಹಾಳಾದಳು ಎಂದು ವಿಡಿಯೋ ಮಾಡಿದ್ದಾನೆ. ನಂತರ ಪತ್ನಿಯನ್ನು ಕೊಲೆ ಮಾಡಿ ಪ್ರದೀಪ್ ಪರಾರಿಯಾಗಿದ್ದಾನೆ. ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

