HomeIndia'ಬಿಯರ್' ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು....!

‘ಬಿಯರ್’ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು….!

ಮದ್ಯದಂಗಡಿ ಒಂದರಲ್ಲಿ ಬಿಯರ್ ಮೇಲೆ ಹತ್ತು ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದ್ದಕ್ಕೆ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ ಬರೋಬ್ಬರಿ 75,000 ರೂಪಾಯಿ ದಂಡ ವಿಧಿಸಲಾಗಿದೆ. ಇಂಥದೊಂದು ಘಟನೆ ನೋಯಿಡಾದಲ್ಲಿ ನಡೆದಿದೆ.

ನೋಯಿಡಾದ ಜಲಾಲ್ಪುರ್ ಏರಿಯಾದಲ್ಲಿದ್ದ ಮದ್ಯದ ಅಂಗಡಿಯಲ್ಲಿ 500 ಎಂ.ಎಲ್.ನ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಗೆ ರವಿ ಸಿಂಗ್ ಎಂಬಾತ 120 ರೂ. ಬದಲಿಗೆ 130 ರೂಪಾಯಿ ವಸೂಲಿ ಮಾಡಿದ್ದ. ಅಲ್ಲದೆ ಈ ಮದ್ಯದ ಅಂಗಡಿಯಲ್ಲಿ ಇತರೆ ಬ್ರಾಂಡ್ ಗಳ ಮೇಲೂ ಹತ್ತು ರೂಪಾಯಿಗಳಿಂದ ಇಪ್ಪತ್ತು ರೂಪಾಯಿಗಳವರೆಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಹಕನ ಸೋಗಿನಲ್ಲಿ ವ್ಯಕ್ತಿಯೊಬ್ಬನನ್ನು ಕಳುಹಿಸಿದ್ದು, ಬಿಯರ್ ಗೆ ಹೆಚ್ಚುವರಿ 10 ರೂಪಾಯಿ ಪಡೆದಿದ್ದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಆರೋಪಿ ರವಿ ಸಿಂಗ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಈ ಬಾರ್ ಲೈಸೆನ್ಸ್ ಹೊಂದಿದ್ದ ಸುರೇಂದ್ರ ಸಿಂಗ್ ಎಂಬವರಿಗೆ 75,000 ರೂಪಾಯಿ ದಂಡ ವಿಧಿಸಲಾಗಿದೆ. ಈ ಕುರಿತಂತೆ ಮಾತನಾಡಿರುವ ಅಬಕಾರಿ ಅಧಿಕಾರಿಗಳು, ಮೊದಲ ಬಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಮತ್ತೊಮ್ಮೆ ಉಲ್ಲಂಘಿಸಿದರೆ ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದು ಮರುಕಳಿಸಿದರೆ ಶಾಶ್ವತವಾಗಿ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular