HomeKarnatakaಬಾವಿಗೆ ಬಿದ್ದ ತಮ್ಮನನ್ನು ರಕ್ಷಿಸಿ ಸಾಹಸ ಮೆರೆದ 8 ವರ್ಷದ ಅಕ್ಕ

ಬಾವಿಗೆ ಬಿದ್ದ ತಮ್ಮನನ್ನು ರಕ್ಷಿಸಿ ಸಾಹಸ ಮೆರೆದ 8 ವರ್ಷದ ಅಕ್ಕ

ತುಮಕೂರು: ತೋಟದ ಬಳಿ ಆಟವಾಡುತ್ತ ಬಾವಿಗೆ ಬಿದ್ದ ತಮ್ಮನನ್ನು 8 ವರ್ಷದ ಸಹೋದರಿ ರಕ್ಷಿಸಿ ಸಾಹಸ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯ ಕುಚ್ಚಂಗಿ ಗ್ರಾಮದಲ್ಲಿ ನಡೆದಿದೆ.

ಇನ್ನೋರ್ವ ಸಹೋದರನ ಜೊತೆ ಆಟವಾಡುತ್ತಿದ್ದಾಗ, ತಮ್ಮ ಹಿಮಾಂಶು ಬಾವಿಗೆ ಬಿದ್ದ ಚಂಡು ಎತ್ತಲು ಹೋಗಿ ಆತನೂ ಬಾವಿಗೆ ಬಿದ್ದಿದ್ದಾನೆ. ಮಕ್ಕಳು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಅಕ್ಕ-ಪಕ್ಕದವರು ಸ್ಥಳಕ್ಕೆ ಬರುವಷ್ಟರಲ್ಲಿ ಲೈಫ್ ಜಾಕೆಟ್ ಧರಿಸಿದ ಹಿಮಾಂಶು ಅಕ್ಕ 8 ವರ್ಷದ ಶಾಲೂ ತಕ್ಷಣ ಬಾವಿಗೆ ಜಿಗಿದು ತಮ್ಮನನ್ನು ರಕ್ಷಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರ ಪ್ರದೇಶ ಮೂಲದ ದಂಪತಿ ತುಮಕೂರಿನ ಕುಚ್ಚಂಗಿ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದರು. ದಂಪತಿಗೆ ನಾಲ್ವರು ಮಕ್ಕಳು. ಶಾಲೂ (8), ಹಿಮಾಂಶು (7), ರಾಶಿ (3) ಹಾಗೂ ಕಪಿಲ್ (2). ಕಪಿಲ್ ಹಾಗೂ ಹಿಮಾಂಶು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಬಳಿಕ ಸ್ಥಳಕ್ಕೆ ಬಂದ ಜನರು ಇಬ್ಬರು ಮಕ್ಕಳನ್ನು ಬಾವಿಯಿಂದ ಮೇಲೆತ್ತಿದ್ದಾರೆ. 8 ವರ್ಷದ ಬಾಲಕಿ ಸಾಹಸಕ್ಕೆ ಜನರು ಬೆರಗಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular