HomeLatest Newsಬಾಯಿ ಚಪ್ಪರಿಸಿಕೊಂಡು ತಿನ್ನಿ ಸಿಹಿ ಹುಳಿ ಮಿಶ್ರಿತ 'ಮಾವಿನಕಾಯಿ' ಚಟ್ನಿ

ಬಾಯಿ ಚಪ್ಪರಿಸಿಕೊಂಡು ತಿನ್ನಿ ಸಿಹಿ ಹುಳಿ ಮಿಶ್ರಿತ ‘ಮಾವಿನಕಾಯಿ’ ಚಟ್ನಿ

ಈಗ ಲಾಕ್ ಡೌನ್ ಸಮಯ. ಹಾಗಾಗಿ ಮನೆಯಲ್ಲಿಯೇ ಇರುವ ವಸ್ತುಗಳಿಂದ ರುಚಿಕರವಾದ ಅಡುಗೆ ಮಾಡಿಕೊಂಡು ಸವಿಯಬಹುದು. ಮನೆಯಲ್ಲಿ ಮಾವಿನಕಾಯಿ ಇದ್ದರೆ ಅದರಿಂದ ರುಚಿಕರವಾದ ಚಟ್ನಿ ಮಾಡಿಕೊಂಡು ಸವಿಯಿರಿ.

ಬೇಕಾಗುವ ಸಾಮಗ್ರಿಗಳು:

ಮಾವಿನಕಾಯಿ-1 ಕತ್ತರಿಸಿದ್ದು, ¼ ಟೀ ಸ್ಪೂನ್-ಮೆಂತೆ, 1 ಟೇಬಲ್ ಸ್ಪೂನ್-ಕಡಲೆಬೇಳೆ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, 1 ಟೀ ಸ್ಪೂನ್-ಜೀರಿಗೆ, 5-ಒಣಮೆಣಸು, ಸ್ವಲ್ಪ-ಇಂಗು, ಬೆಳ್ಳುಳ್ಳಿ-5 ಎಸಳು, ಕರಿಬೇವು-5 ಎಸಳು, ಸಾಸಿವೆ-1 ಟೀ ಸ್ಪೂನ್. ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ –ಸ್ವಲ್ಪ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಗ್ಯಾಸ್ ಹಚ್ಚಿ ಅದರ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೆ ಅದಕ್ಕೆ ಕಡಲೆಬೇಳೆ, ಉದ್ದಿನಬೇಳೆ, ಮೆಂತೆ ಹಾಕಿ ಹುರಿಯಿರಿ. ನಂತರ ಒಣಮೆಣಸು ಹಾಕಿ ಫ್ರೈ ಮಾಡಿ. ನಂತರ ಇದು ತಣ್ಣಗಾಗಲು ಬಿಡಿ.

ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಮಾವಿನಕಾಯಿ, ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, 2 ಒಣಮೆಣಸು, ಕರಿಬೇವು ಹಾಕಿ ಅದು ಬಿಸಿಯಾದಾಗ ರುಬ್ಬಿಕೊಂಡ ಮಸಾಲೆ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular