ಪ್ರವಾಹದಲ್ಲಿ ಸಿಲುಕಿದ ಬಸ್; ಪ್ರಾಣ ರಕ್ಷಣೆಗಾಗಿ ಪ್ರಯಾಣಿಕರ ಪರದಾಟ; ಭಯಂಕರ ದೃಶ್ಯ ವೈರಲ್

ಬಿಜ್ನೋರ್: ಮಳೆ ಅಬ್ಬರಕ್ಕೆ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹದ ನೀರಿನಲ್ಲಿ ಸಿಲುಕಿದ ಬಸ್ ನಲ್ಲಿದ್ದ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಈ ಘಟನೆ ನಡೆದಿದೆ. ಬಸ್ ಹರ್ದಿವಾರ್-ಬಿಜ್ನೋರ್ ನಡುವೆ ಸಾಗುತ್ತಿತ್ತು. ಈ ವೇಳೆ ಕೊಟವಾಲಿ ಕಾಲೋಚಿತ ನದಿಯಲ್ಲಿ ಪ್ರವಾಹ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಮಂಡವಾಲಿ ಪ್ರದೇಶದಲ್ಲಿ ಬಸ್ ಪ್ರವಾಹದ ಮಧ್ಯೆ ಸಿಲುಕಿಕೊಂಡಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣ ರಕ್ಷಣೆಗಾಗಿ ಬಸ್ ಕಿಟಕಿ ಮೂಲಕ ಬಸ್ ಟಾಪ್ ಮೇಲೆ ಹತ್ತಿ ನಿಂತಿದ್ದಾರೆ. ಕೆಲವರು ಅಸಹಾಯಕತೆಯಿಂದ ಬಸ್ ನಲ್ಲಿಯೇ ಕುಳಿತಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದು, ಜೆಸಿಬಿ ಮೂಲಕ ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಒಟ್ಟು 40 ಜನರನ್ನು ರಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read