HomeLatest Newsಪೋಷಕಾಂಶಭರಿತ ರಾಗಿ ರೊಟ್ಟಿ ಸವಿಯಿರಿ

ಪೋಷಕಾಂಶಭರಿತ ರಾಗಿ ರೊಟ್ಟಿ ಸವಿಯಿರಿ

ಸಮೃದ್ಧವಾದ ಪೋಷಕಾಂಶವನ್ನು ಹೊಂದಿರುವ ರಾಗಿ ಬಹುತೇಕ ಜನರ ಮುಖ್ಯ ಆಹಾರವಾಗಿದೆ. ಇದರಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ.

ಅವುಗಳಲ್ಲಿ ರಾಗಿ ರೊಟ್ಟಿಯೂ ಒಂದು. ಇದರಲ್ಲಿ ಪ್ರೋಟೀನ್ ಮತ್ತು ನಾರಿನಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ದೇಹಕ್ಕೆ ಹೆಚ್ಚು ಶಕ್ತಿ ದೊರೆಯುತ್ತದೆ. ಇದನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಗಿ ಹಿಟ್ಟು- 3/4 ಬೌಲ್
ಎಣ್ಣೆ – ಬಳಿಯಲು
ಹೆಚ್ಚಿಕೊಂಡ ಈರುಳ್ಳಿ- 2
ನೀರು- ಮಿಶ್ರಗೊಳಿಸಲು
ಕೊತ್ತಂಬರಿ ಸೊಪ್ಪು – 1/2 ಕಪ್
ಹಸಿಮೆಣಸಿನ ಕಾಯಿ- 5-6
ಜೀರಿಗೆ -1 ಚಮಚ
ಉಪ್ಪು -1/2 ಚಮಚ

ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಸೇರಿಸಿ. ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ.

ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆಯ ಆಕಾರದಲ್ಲಿ ಮಾಡಿಕೊಳ್ಳಿ. ಬಳಿಕ ನಾನ್ ಸ್ಟಿಕ್ ಪೇಪರ್ ತೆಗೆದುಕೊಂಡು, ಎಣ್ಣೆಯನ್ನು ಸವರಿ ಹಿಟ್ಟಿನ ಉಂಡೆಯನ್ನು ಅದರ ಮೇಲಿಟ್ಟು, ಕೈಯಿಂದ ತಟ್ಟಿ. ನಂತರ ಮೂರು ರಂಧ್ರವನ್ನು ಮಾಡಿದರೆ ರೊಟ್ಟಿ ಚೆನ್ನಾಗಿ ಬೇಯುತ್ತದೆ.

ತವಾ ಅಥವಾ ಬಾಣಲೆಯ ಮೇಲೆ ಎರಡು ಟೇಬಲ್ ಚಮಚ ಎಣ್ಣೆಯನ್ನು ಸವರಿ, ತಟ್ಟಿಕೊಂಡ ರೊಟ್ಟಿಯನ್ನು ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಿ. ಬೆಂದ ನಂತರ ಒಂದು ಪ್ಲೇಟ್‍ಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ರೊಟ್ಟಿ ಸವಿಯಲು ನೀಡಿ.

For Latest News Updates, Join Our Whatsapp Community🚩
RELATED ARTICLES

Most Popular