HomeKarnataka'ಪೆಟ್ರೋಲಿಯಂ ರಿಟೇಲ್ ಮಳಿಗೆ' ಆರಂಭಿಸಲಿಚ್ಚಿಸುವ ಮಾಜಿ ಸೈನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

‘ಪೆಟ್ರೋಲಿಯಂ ರಿಟೇಲ್ ಮಳಿಗೆ’ ಆರಂಭಿಸಲಿಚ್ಚಿಸುವ ಮಾಜಿ ಸೈನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪೆಟ್ರೋಲಿಯಂ ರಿಟೇಲ್ ಮಳಿಗೆ ಆರಂಭಿಸಲು ಬಯಸುವ ಮಾಜಿ ಸೈನಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಈ ಕುರಿತು ಅರ್ಜಿ ಆಹ್ವಾನಿಸಲಾಗಿದೆ.

ಮಾಜಿ ಸೈನಿಕರು ಪೆಟ್ರೋಲಿಯಂ ರಿಟೇಲ್ ಮಳಿಗೆ ಆರಂಭಿಸಲು ಅವಕಾಶ ಸಿಗಲಿದ್ದು, ಡಿಫೆನ್ಸ್ ವರ್ಗ (ಕೆಟಗರಿ) ದಡಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ವೆಬ್ ಸೈಟ್ www.petrolpump-dealerchayan.in ಮೂಲಕ ಸೆಪ್ಟೆಂಬರ್ 27 ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular