HomeCrimeಪದೇ ಪದೇ ʼಆಜಾ ಆಜಾʼ ಎನ್ನುತ್ತಿದ್ದವನೀಗ ಪೋಕ್ಸೋ ಕಾಯ್ದೆ ಅಡಿ ದೋಷಿ

ಪದೇ ಪದೇ ʼಆಜಾ ಆಜಾʼ ಎನ್ನುತ್ತಿದ್ದವನೀಗ ಪೋಕ್ಸೋ ಕಾಯ್ದೆ ಅಡಿ ದೋಷಿ

ಹುಡುಗಿಯನ್ನು ಹಿಂಬಾಲಿಸುವುದು ಮತ್ತು ಆಕೆಗೆ ʼಆಜಾ ಆಜಾʼ ಎಂದು ಪದೇ ಪದೇ ಹೇಳುವುದು ಲೈಂಗಿಕ ಕಿರುಕುಳವಾಗಿದೆ ಎಂದು ಮುಂಬೈನ ದಿಂಡೋಶಿಯ ಸೆಷನ್ಸ್ ನ್ಯಾಯಾಲಯವು ಹೇಳಿದೆ.

ಹುಡುಗಿಗೆ ಪದೇ ಪದೇ ʼಆಜಾ ಆಜಾʼ ಎಂದು ಹೇಳುತ್ತಿದ್ದ 32 ವರ್ಷದ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ.

ಈ ಘಟನೆಯು ಸೆಪ್ಟೆಂಬರ್ 2015 ರಲ್ಲಿ ನಡೆದಿದ್ದು, ಆಗ ಬಾಲಕಿ 15 ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯಾಯಾಲಯದ ಮುಂದೆ ಹಾಜರಾಗಿ, ತಾನು ನಡೆದುಕೊಂಡು ಫ್ರೆಂಚ್ ಟ್ಯೂಷನ್‌ಗೆ ಹೋಗುತ್ತಿದ್ದಾಗ, ಆ ವ್ಯಕ್ತಿ ತನ್ನ ಇಪ್ಪತ್ತರ ಮಧ್ಯದಲ್ಲಿ ಬೈಸಿಕಲ್‌ನಲ್ಲಿ ತನ್ನನ್ನು ಹಿಂಬಾಲಿಸಿ ಪದೇ ಪದೇ ‘ಆಜಾ ಆಜಾ’ ಎಂದು ಹೇಳಿದ್ದನೆಂದು ಹುಡುಗಿ ಹೇಳಿದ್ದಳು.

ಅವನು ತನ್ನ ಈ ರೀತಿಯ ವರ್ತನೆಯನ್ನು ಇನ್ನೂ ಕೆಲವು ದಿನಗಳವರೆಗೆ ಮುಂದುವರೆಸಿದ್ದನು. ಹುಡುಗಿ ಘಟನೆಯ ಬಗ್ಗೆ ತನ್ನ ಟ್ಯೂಷನ್ ಟೀಚರ್ ಹಾಗೂ ಪೋಷಕರಿಗೆ ಹೇಳಿದ್ದಳು. ಶೀಘ್ರದಲ್ಲೇ, ಅವನು ಪಕ್ಕದ ಕಟ್ಟಡದಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದುದನ್ನು ಕಂಡು ತನ್ನ ತಾಯಿಗೆ ತಿಳಿಸಿದ್ದಳು. ತಾಯಿ ಪೊಲೀಸರಿಗೆ ದೂರು ನೀಡಿದ್ದಳು.

For Latest News Updates, Join Our Whatsapp Community🚩
RELATED ARTICLES

Most Popular