ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

ಇದಕ್ಕೆ ಕಾಮೆಂಟ್ ಮಾಡಿದ್ದ ಕೆಲವರು ಹಣದಾಸೆಗಾಗಿ ಮಹಾಲಕ್ಷ್ಮಿ, ರವೀಂದರ್ ಚಂದ್ರಶೇಖರನ್ ಅವರನ್ನು ಮದುವೆಯಾಗಿದ್ದಾರೆ ಎಂದು ಟೀಕಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಆದ ಲೋಕದಲ್ಲಿ ಮುಳುಗಿದ್ದರು.

ಇದೀಗ ಮಹಾಲಕ್ಷ್ಮಿ ಪತಿ ಜೊತೆಗಿರುವ ಕೆಲ ಫೋಟೋಗಳನ್ನು ಹಾಕಿದ್ದು, ನಮ್ಮಿಬ್ಬರದು ‘ಮೇಡ್ ಫಾರ್ ಈಚ್ ಅದರ್ ಜೋಡಿಯಲ್ಲ ಮ್ಯಾಡ್ ಫಾರ್ ಈಚ್ ಅದರ್’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದಕ್ಕೂ ಟೀಕಿಸುತ್ತಿರುವ ಕೆಲವರು ದುಡ್ಡಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ. ಆದರೆ ಮತ್ತಷ್ಟು ಮಂದಿ, ಇದು ಅವರವರ ಇಷ್ಟ. ಸ್ವತಃ ಅವರುಗಳೇ ನಾವು ಸಂತಸದಿಂದಿದ್ದೇವೆ ಎನ್ನುವಾಗ ಬೇರೆಯವರು ಏಕೆ ಟೀಕಿಸಬೇಕು ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read