HomeCrimeದೃಶ್ಯಂ ಚಿತ್ರವನ್ನೇ ಹೋಲುವ ನೈಜ ಘಟನೆ; ಪತಿಯನ್ನೇ ಕೊಂದು ಪತ್ನಿ ಮಾಡಿದ್ದಾಳೆ ಇಂಥಾ ಕೆಲಸ....!

ದೃಶ್ಯಂ ಚಿತ್ರವನ್ನೇ ಹೋಲುವ ನೈಜ ಘಟನೆ; ಪತಿಯನ್ನೇ ಕೊಂದು ಪತ್ನಿ ಮಾಡಿದ್ದಾಳೆ ಇಂಥಾ ಕೆಲಸ….!

ದೃಶ್ಯಂ ಸಿನಿಮಾವನ್ನೇ ಹೋಲುವ ಕೊಲೆಯ ರಹಸ್ಯವನ್ನು ಗಾಜಿಯಾಬಾದ್ ಪೊಲೀಸರು ಭೇದಿಸಿದ್ದಾರೆ. ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಶವವನ್ನು ನಿರ್ಮಾಣ ಹಂತದಲ್ಲಿರುವ ಪ್ಲಾಟ್‌ನಲ್ಲಿ ಹೂತು ಹಾಕಿದ್ದಾಳೆ. ಆರೋಪಿಗಳು ಅಪರಾಧವನ್ನು ಮುಚ್ಚಿಹಾಕಲು ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ಕೂಡ ನಿರ್ಮಿಸಿದ್ದರು. ಕೊನೆಗೂ ಪೊಲೀಸರು ಅಪರಾಧಿಗಳನ್ನು ಪತ್ತೆ ಮಾಡಿದ್ದಾರೆ.

ಪತಿಯನ್ನೇ ಕೊಲೆಗೈದ ನೀತು ಮತ್ತು ಆಕೆಯ ಪ್ರಿಯಕರ ಹರ್ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಸ್ರಖ್‌ ಎಂಬಲ್ಲಿ ಹೂತು ಹಾಕಿದ್ದ ಶವವನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಮೂರನೇ ಆರೋಪಿ ಗೌರವ್ ಎಂಬ ಮೇಸ್ತ್ರಿಗಾಗಿ ಹುಡುಕಾಡುತ್ತಿದ್ದಾರೆ. ಜನವರಿ 10 ರಂದು ಮೃತನ ಸಹೋದರ ಛೋಟೇಲಾಲ್ ಪೊಲೀಸರಿಗೆ ದೂರು ನೀಡಿದ್ದ. ತನ್ನ ಸಹೋದರ ಒಂದು ವಾರದಿಂದ ನಾಪತ್ತೆಯಾಗಿರುವುದಾಗಿ ತಿಳಿಸಿದ್ದ. ಪೊಲೀಸರು  ಪತ್ನಿ ನೀತು ಎಂಬಾಕೆಯನ್ನು ವಿಚಾರಣೆಗೊಳಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಡ ಕಾಣೆಯಾಗಿ ವಾರವಾಗಿದ್ದರೂ ಆಕೆ ದೂರು ನೀಡದೇ ಇರುವುದು ಅನುಮಾನಾಸ್ಪದವಾಗಿತ್ತು. ಪೊಲೀಸರು ಆಕೆಯ ಪ್ರಿಯಕರ ಹರ್ಪಾಲ್‌ನನ್ನು ಹಿಂಬಾಲಿಸಿದ್ದಾರೆ. ಹರ್ಪಾಲ್‌ ಮತ್ತು ನೀತು ಮದುವೆಗೂ ಮುನ್ನವೇ ಪ್ರೀತಿಸುತ್ತಿದ್ದರಂತೆ. ಪರಸ್ಪರ ಮದುವೆಯಾಗಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದ್ರೆ ನೀತು ಹಾಗೂ ಸತೀಶ್‌ ಮದುವೆ ನೆರವೇರಿತ್ತು. ಅಷ್ಟಕ್ಕೇ ಸುಮ್ಮನಾಗದ ನೀತು ಹಾಗೂ ಹರ್ಪಾಲ್‌, ಸತೀಶ್‌ನನ್ನು ಕೊಲೆ ಮಾಡಲು ಸ್ಕೆಚ್‌ ಹಾಕಿದ್ದಾರೆ.

ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಹರ್ಪಾಲ್, ನೀತು ಸಹಾಯದಿಂದ ಸತೀಶ್‌ನನ್ನು ಕೊಂದು ಶವವನ್ನು ನೆರೆಹೊರೆಯ ಜಮೀನಿನಲ್ಲಿ ಹೂಳಲು ಯೋಜಿಸಿದ್ದ. ಜನವರಿ 2 ರಂದು ನೀತು ಸತೀಶ್‌ಗೆ ವಿಷ ಕುಡಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಹರ್ಪಾಲ್ ಸಹಾಯದಿಂದ ಶವವನ್ನು ಅವರು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಹೂತುಹಾಕಿ ನಂತರ ಅಪರಾಧವನ್ನು ಮುಚ್ಚಿಹಾಕಲು ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದ್ದಾರೆ. ಈ ಘಟನೆ ಸಂಪೂರ್ಣ ದೃಶ್ಯಂ ಸಿನೆಮಾದಂತೆಯೇ ಇದೆ. ಆದರೆ ಅಪರಾಧಿಗಳು ಚಿತ್ರ ನೋಡಿ ಪ್ರೇರಣೆ ಪಡೆದು ಈ ಕೃತ್ಯ ಎಸಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular