HomeRecipiesದಿಢೀರಂತ ಮಾಡಿ ರವಾ ಬರ್ಫಿ

ದಿಢೀರಂತ ಮಾಡಿ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು:

ಬಾಂಬೆ ರವಾ- 1 ಕಪ್, ಸಕ್ಕರೆ 3/4 ಕಪ್, ಪಲಾವ್ ಎಲೆ-3, ಲವಂಗ-5, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ತುಪ್ಪ- 1/4 ಕಪ್, ಪುಡ್ ಕಲರ್, ವೆನಿಲ್ಲಾ ಎಸೆನ್ಸ್, ಟೂಟಿ ಫ್ರೂಟಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ, ಇದಕ್ಕೆ ರವಾ ಹಾಕಿ ಚೆನ್ನಾಗಿ ಹುರಿಯಿರಿ. ಜೊತೆಯಲ್ಲೇ ಪಲಾವ್ ಎಲೆ ಹಾಗೂ ಲವಂಗ ಹಾಕಿ ಹುರಿಯಿರಿ. ನಂತರ ಎರಡು ಕಪ್ ರವಾಗೆ ಬಿಸಿ ನೀರು ಹಾಕಿ ಮಿಕ್ಸ್ ಮಾಡಿ. ಬಳಿಕ ಫುಡ್ ಕಲರ್ ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ವೇಳೆ ಪಲಾವ್ ಎಲೆಯನ್ನು ತೆಗೆಯಬೇಕು. ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ. ಜೊತೆಗೆ ಟೂಟಿ ಫ್ರೂಟಿಯನ್ನು ಕೂಡ ಸೇರಿಸಿ. ಸರ್ವಿಂಗ್ ಬೌಲ್ ಗೆ ತುಪ್ಪ ಹಚ್ಚಿಟ್ಟು ಈ ಮಿಶ್ರಣವನ್ನು ಅದರಲ್ಲಿ ಹಾಕಿ, ಅರ್ಧ ಗಂಟೆ ತಣಿಯಲು ಬಿಟ್ಟು ನಂತರ ಬೇಕಾದ ರೀತಿಯಲ್ಲಿ ಕಟ್ ಮಾಡಿಟ್ಟರೆ ಸವಿಯಲು ರುಚಿಯಾದ ರವಾ ಬರ್ಫಿ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular