HomeLifestyleಟೇಸ್ಟಿಯಾದ ಕೋಕೋನಟ್ ಬರ್ಫಿ ಮಾಡುವ ವಿಧಾನ

ಟೇಸ್ಟಿಯಾದ ಕೋಕೋನಟ್ ಬರ್ಫಿ ಮಾಡುವ ವಿಧಾನ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ.

ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಕಾಗುವ ಸಾಮಗ್ರಿಗಳು :

2 ದೊಡ್ಡ ತೆಂಗಿನ ಕಾಯಿ, ½ ಕೆ.ಜಿ. ಖೋವಾ, 1 ಸ್ಪೂನ್ ಏಲಕ್ಕಿ ಪುಡಿ, 25 ಗ್ರಾಂ ಪಿಸ್ತಾ, 250 ಗ್ರಾಂ ಸಕ್ಕರೆ, 1 ಸ್ಪೂನ್ ರೋಸ್ ಎಸೆನ್ಸ್, 25 ಗ್ರಾಂ ಬಾದಾಮಿ.

ತಯಾರಿಸುವ ವಿಧಾನ:

ಕೊಬ್ಬರಿಯನ್ನು ತುರಿದುಕೊಂಡು 250 ಗ್ರಾಂ ಸಕ್ಕರೆಯನ್ನು ನೀರಿನಲ್ಲಿ ಹಾಕಿ, ಅದು ಮೂರನೇ ಒಂದು ಭಾಗದಷ್ಟು ಇಂಗುವವರೆಗೂ ಕುದಿಸಿರಿ. ನಂತರದಲ್ಲಿ ಅದಕ್ಕೆ ತುರಿದ ಕೊಬ್ಬರಿ. ಖೋವಾ ಹಾಕಿ ಚೆನ್ನಾಗಿ ಕಲೆಸಿರಿ. ಪಿಸ್ತಾ ಮತ್ತು ಬಾದಾಮಿಯನ್ನು ಚೂರುಗಳಾಗಿ ಮಾಡಿ ಹಾಕಿರಿ.

ನಂತರದಲ್ಲಿ ಏಲಕ್ಕಿ ಪುಡಿ, ರೋಸ್ ಎಸೆನ್ಸ್ ಬೆರೆಸಿ ಎಲ್ಲವನ್ನು ಚೆನ್ನಾಗಿ ಚಮಚದಿಂದ ತಿರುವಿರಿ. ಮಿಶ್ರಣ ತಳ ಬಿಟ್ಟು ಬಂದ ನಂತರ ತುಪ್ಪ ಸರಿದ ತಟ್ಟೆಗೆ ಅದನ್ನು ಹಾಕಿರಿ. ಅದು ಆರಿದ ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಲು ಕೊಡಿ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular