HomeAstroಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಧಕ್ಕೇ ನಿಂತ ನಿಮ್ಮ ಕೆಲಸ ಪೂರ್ಣಗೊಳ್ಳಲು ಅನುಸರಿಸಿ ಈ ಉಪಾಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಧಕ್ಕೇ ನಿಂತ ನಿಮ್ಮ ಕೆಲಸ ಪೂರ್ಣಗೊಳ್ಳಲು ಅನುಸರಿಸಿ ಈ ಉಪಾಯ

ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅರ್ಧಕ್ಕೆ ನಿಂತ ಕೆಲಸವನ್ನು ಹೇಗೆ ಪೂರ್ಣಗೊಳಿಸೋದು ಎಂಬುದನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಪ್ರತಿ ದಿನ ಆಕಳು, ನಾಯಿ, ಕಾಗೆ, ಪಕ್ಷಿಗಳಿಗೆ ಆಹಾರ ನೀಡಬೇಕು. ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. ಜೊತೆಗೆ ಎಲ್ಲ ರೀತಿಯ ಸಮಸ್ಯೆಗೆ ಪರಿಹಾರ ಸಿಗಲು ಶುರುವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಸುವಿನಲ್ಲಿ ಧನಾತ್ಮಕ ಶಕ್ತಿಯಿರುತ್ತದೆ. ಮನೆ ಸುತ್ತಮುತ್ತ ಆಕಳಿದ್ದರೆ ಎಲ್ಲ ಸಮಸ್ಯೆಯಿಂದ ಮುಕ್ತಿಹೊಂದಿ ಸುಖ-ಸಮೃದ್ಧಿ ಜೀವನ ನಡೆಸುತ್ತಿದ್ದೀರಿ ಎಂದರ್ಥ. ಪ್ರತಿ ದಿನ ಆಕಳಿಗೆ ಆಹಾರ ನೀಡಿದ್ರೆ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ನಾಯಿಗೆ ಪ್ರತಿದಿನ ಆಹಾರ ಹಾಕುವುದ್ರಿಂದ ದುಷ್ಟರು ನಿಮ್ಮಿಂದ ದೂರವಾಗಲಿದ್ದಾರೆ. ಭಯ ದೂರವಾಗುತ್ತದೆ. ನಾಯಿಗೆ ಸಿಹಿ ರೊಟ್ಟಿಯನ್ನು ನೀಡಬೇಕು.

ಕಾಗೆಗೆ ಆಹಾರ ನೀಡುವುದ್ರಿಂದ ಪಿತೃ ದೋಷ ಹಾಗೂ ಕಾಳ ಸರ್ಪ ದೋಷ ನಿವಾರಣೆಯಾಗಲಿದೆ. ಶನಿಯನ್ನು ಪ್ರಸನ್ನಗೊಳಿಸಲೂ ಕಾಗೆಗೆ ಆಹಾರ ನೀಡಬೇಕು.

ಪಕ್ಷಿಗಳಿಗೆ ಆಹಾರ ನೀಡುವುದ್ರಿಂದ ವ್ಯಾಪಾರ-ನೌಕರಿಯಲ್ಲಿ ಲಾಭವಾಗಲಿದೆ. ಮನೆಯ ಖುಷಿ ಹೆಚ್ಚಾಗುತ್ತದೆ. ವ್ಯಕ್ತಿಯ ಸಮೃದ್ಧಿಯ ಬಾಗಿಲು ತೆರೆಯಲಿದೆ.

ಸಮಾಜದಲ್ಲಿ ಗೌರವ ಪ್ರಾಪ್ತಿಗಾಗಿ ಪಾರಿವಾಳಕ್ಕೆ ಕಾಳುಗಳನ್ನು ನೀಡಬೇಕು. ಶುಕ್ರವಾರ ಕಾಳುಗಳನ್ನು ಖರೀದಿ ಮಾಡಿ ಶನಿವಾರದಿಂದ ಹಾಕಲು ಶುರು ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular