HomeKarnatakaಜೆಡಿಎಸ್ ಗೆ ಸಿಗುವುದು 23 ಸ್ಥಾನ; ತಪ್ಪಾಗಿ ಮುಂದೆ 1 ಸೇರಿಸಿ 123 ಎನ್ನುತ್ತಿದ್ದಾರೆ: ಜಮೀರ್...

ಜೆಡಿಎಸ್ ಗೆ ಸಿಗುವುದು 23 ಸ್ಥಾನ; ತಪ್ಪಾಗಿ ಮುಂದೆ 1 ಸೇರಿಸಿ 123 ಎನ್ನುತ್ತಿದ್ದಾರೆ: ಜಮೀರ್ ಅಹಮದ್ ವ್ಯಂಗ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗಳಿಸಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ವ್ಯಂಗ್ಯವಾಡಿರುವ ಶಾಸಕ ಜಮೀರ್ ಅಹ್ಮದ್, ಜೆಡಿಎಸ್ ಗೆ ಸಿಗುವುದು 23 ಸ್ಥಾನ. ತಪ್ಪಾಗಿ ಮುಂದೆ 1 ಸೇರಿಸಿ 123 ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನ ಎಚ್.ಡಿ. ರೇವಣ್ಣ, ರಾಜ್ಯದಲ್ಲಿ ಮುಂದೆ ಸರ್ಕಾರ ರಚಿಸಲು ಯಾರೇ ಆದರೂ ದೇವೇಗೌಡರ ಮನೆ ಬಾಗಿಲಿಗೆ ಬರಬೇಕು ಎಂದು ಹೇಳುತ್ತಾರೆ. ಇದರರ್ಥ ಅವರಿಗೆ ಬಹುಮತ ಬರುವುದಿಲ್ಲ ಎಂದು ತಾನೇ ಎಂದು ಪ್ರಶ್ನಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ಸಂದರ್ಭದಲ್ಲಿ ಪ್ರಸ್ತುತ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಕುರಿತಂತೆ ಗೊಂದಲ ಉಂಟಾಗಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ ವೇಳೆ, ಇದು ಆ ಪಕ್ಷದ ಆಂತರಿಕ ವಿಚಾರ ಈ ಕುರಿತು ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular