HomeKarnataka'ಜಾಗ್ವಾರ್' ಹೆಸರಿನ ಒಂಟಿ ಎತ್ತು ಬರೋಬ್ಬರಿ 9.20 ಲಕ್ಷ ರೂಪಾಯಿಗೆ ಮಾರಾಟ...!

‘ಜಾಗ್ವಾರ್’ ಹೆಸರಿನ ಒಂಟಿ ಎತ್ತು ಬರೋಬ್ಬರಿ 9.20 ಲಕ್ಷ ರೂಪಾಯಿಗೆ ಮಾರಾಟ…!

ಎತ್ತಿನ ಗಾಡಿ ಓಟದ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದ ಜಾಗ್ವಾರ್ ಹೆಸರಿನ ಒಂಟಿ ಎತ್ತೊಂದು ಬರೋಬ್ಬರಿ 9.20 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದ್ದು, ಈ ಎತ್ತು ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಯುವ ರೈತ ನವೀನ್ ಎಂಬವರಿಗೆ ಸೇರಿದ್ದಾಗಿದೆ.

ಒಂದೂವರೆ ವರ್ಷದ ಹಿಂದೆ 1.5 ಲಕ್ಷ ರೂಪಾಯಿಗಳಿಗೆ ಈ ಎತ್ತನ್ನು ಖರೀದಿಸಿದ್ದ ನವೀನ್, ಇದಕ್ಕೆ ಪೌಷ್ಟಿಕ ಆಹಾರ ನೀಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ತರಬೇತಿ ನೀಡಿದ್ದರು. ಈ ಎತ್ತು ಚಿರತೆ ವೇಗದಲ್ಲಿ ಓಡುತ್ತಿದ್ದ ಕಾರಣ ಇದಕ್ಕೆ ‘ಜಾಗ್ವಾರ್’ ಎಂಬ ಹೆಸರನ್ನು ಇಟ್ಟಿದ್ದರು.

ಹೊರ ರಾಜ್ಯದ ಎತ್ತಿನ ಗಾಡಿ ಓಟದ ಸ್ಪರ್ಧೆಗಳಲ್ಲಿ ಕೂಡ ಈ ಎತ್ತು ಪಾಲ್ಗೊಂಡು ಬಹುಮಾನ ಗಳಿಸಿದ್ದು, ಇದರ ವೇಗವನ್ನು ನೋಡಿ ಮೆಚ್ಚಿಕೊಂಡಿದ್ದ ತಮಿಳುನಾಡಿನ ಕೊಯಮತ್ತೂರು ಸಮೀಪದ ಸರವಣಂ ಪಟ್ಟಿ ಗ್ರಾಮದ ಸಿರವೈ ತಂಬಿ ಎಂಬವರು ಈಗ ನವೀನ್ ಅವರಿಂದ ಈ ಎತ್ತನ್ನು ಖರೀದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular