HomeKarnatakaಚಾರ್ಮಡಿ ಘಾಟ್ ನಲ್ಲಿ ಪ್ರವಾಸಿಗರ ಹುಚ್ಚಾಟ; ಮಳೆ ನಡುವೆ ಬಂಡೆಯ ಮೇಲೆ ನಿಂತು ಸೆಲ್ಫಿಗೆ ಪೋಸ್

ಚಾರ್ಮಡಿ ಘಾಟ್ ನಲ್ಲಿ ಪ್ರವಾಸಿಗರ ಹುಚ್ಚಾಟ; ಮಳೆ ನಡುವೆ ಬಂಡೆಯ ಮೇಲೆ ನಿಂತು ಸೆಲ್ಫಿಗೆ ಪೋಸ್

ಹಾಸನ: ಹಾಸನ, ಉಡುಪಿ, ಚಿಕ್ಕಮಗಳೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ದುರಂತಗಳು ಸಂಭವಿಸುತ್ತಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಡಿಘಾಟ್ ನ ಅಪಾಯದ ಸ್ಥಳದಲ್ಲಿ ನಿಂತು ಯುವಕ-ಯುವತಿಯರು ದುಸ್ಸಾಹಸ ಮಾಡುತ್ತಿದ್ದಾರೆ. ಮಳೆ ನಡುವೆಯೇ ಬಂಡೆ ಮೇಲೆ ಹತ್ತಿ ಸೆಲ್ಫಿ, ವಿಡಿಯೋಗಳಿಗೆ ಪೋಸ್ ಕೊಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಸ್ಥಳದಲ್ಲೀ ಈಗಾಗಲೇ ಕೆಲ ಪ್ರವಾಸಿಗರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಎಚ್ಚರಿಕೆಯನ್ನೂ ಲೆಕ್ಕಿಸದೇ ಅಪಾಯದ ಸ್ಥಳದಲ್ಲಿ ನಿಂತು ಮೋಜು-ಮಸ್ತಿ ಮಾಡುತ್ತಿದ್ದಾರೆ. ರೀಲ್ಸ್ ಮಾಡಲು ಜಲಪಾತದ ಬಳಿ ಹೋದ ಯುವಕ ಕಾಲು ಜಾರಿ ಬಿದ್ದು, ಕಣ್ಮರೆಯಾಗಿರುವ ದೃಶ್ಯ…… ಕುಟುಂಬದವರ ಆಕ್ರಂದನ ಕಣ್ಮುಂದೆಯೇ ಇದೆ……ಆದರೂ ಪ್ರವಾಸಿಗರ ಹುಚ್ಚಾಟಕ್ಕೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ.

 

For Latest News Updates, Join Our Whatsapp Community🚩
RELATED ARTICLES

Most Popular