HomeIndiaಗೋಮೂತ್ರದಿಂದ ಕ್ಯಾನ್ಸರ್ ವಾಸಿ; ಬಿಪಿ - ಶುಗರ್ ಅಲೋಪತಿಯಿಂದ ಗುಣಪಡಿಸಲು ಸಾಧ್ಯವಿಲ್ಲ: ಬಾಬಾ ರಾಮದೇವ್ ಹೇಳಿಕೆ

ಗೋಮೂತ್ರದಿಂದ ಕ್ಯಾನ್ಸರ್ ವಾಸಿ; ಬಿಪಿ – ಶುಗರ್ ಅಲೋಪತಿಯಿಂದ ಗುಣಪಡಿಸಲು ಸಾಧ್ಯವಿಲ್ಲ: ಬಾಬಾ ರಾಮದೇವ್ ಹೇಳಿಕೆ

ಅಲೋಪತಿ ವೈದ್ಯಕೀಯ ಪದ್ಧತಿ ವಿರುದ್ಧ ಸದಾ ಕಿಡಿ ಕಾರುವ ಪತಂಜಲಿಯ ಬಾಬಾ ರಾಮದೇವ್ ಈಗ ಮತ್ತೆ ಅದನ್ನು ಮುಂದುವರಿಸಿದ್ದಾರೆ. ಅಲೋಪತಿ ವೈದ್ಯಕೀಯ ಪದ್ಧತಿ ಮೂಲಕ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಉತ್ತರಕಾಂಡ ಆಯುರ್ವೇದ ವಿವಿ ಆಯೋಜಿಸಿದ್ದ 2023ರ ಅಂತರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಈ ಮಾತುಗಳನ್ನು ಹೇಳಿದ್ದು, ಆದರೆ ಆಯುರ್ವೇದದಲ್ಲಿ ಇವುಗಳನ್ನು ಬುಡ ಸಮೇತವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ ಗೋಮೂತ್ರದಲ್ಲಿನ ಕೆಲವು ಪುಷ್ಠಿಕರ ಅಂಶಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಮದ್ದುಗಳೊಂದಿಗೆ ಬೆರೆಸಿ ಸೇವಿಸಿದಾಗ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಿರುವ ಹಲವು ಉದಾಹರಣೆಗಳಿವೆ, ಹಾಗೆಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆಗೂ ಆಯುರ್ವೇದದಲ್ಲಿ ಮದ್ದಿದೆ ಎಂದು ಸಹ ಬಾಬಾ ರಾಮದೇವ್ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular