HomeCrimeಗುಂಡಿಕ್ಕಿ ಮಾವನನ್ನೇ ಕೊಂದ ಸೊಸೆ....!

ಗುಂಡಿಕ್ಕಿ ಮಾವನನ್ನೇ ಕೊಂದ ಸೊಸೆ….!

ತನ್ನ ಮಾವನೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ ಸೊಸೆಯೊಬ್ಬಳು ಕೋಪದ ಭರದಲ್ಲಿ ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ನಡೆದಿದೆ.

73 ವರ್ಷದ ಕೃಷಿಕ ಕೆ.ಎ. ಮಂದಣ್ಣ ಮೃತಪಟ್ಟವರಾಗಿದ್ದು ಅವರನ್ನು ಸೊಸೆ ನೀಲಮ್ಮ (ಜ್ಯೋತಿ) ತಮ್ಮ ಪತಿ ಕೆ.ಎಂ. ನಾಣಯ್ಯ ಅವರ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ನಾಣಯ್ಯ ಹೊರ ಹೋಗಿದ್ದ ಸಂದರ್ಭದಲ್ಲಿ ಮಾವ – ಸೊಸೆಗೆ ಜಗಳ ಆರಂಭವಾಗಿದೆ. ಆಗ ಜ್ಯೋತಿ ಕೋವಿಯಿಂದ ಗುಂಡು ಹಾರಿಸಿ ಮಂದಣ್ಣ ಅವರ ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular