HomeIndiaಗನ್ ತೋರಿಸಿ ಬೆದರಿಸಿದರೂ ಅಳುಕದೆ ಕಳ್ಳರನ್ನು ಹಿಮ್ಮೆಟ್ಟಿಸಿದ ಮಹಿಳೆ; ವಿಡಿಯೋ ವೈರಲ್

ಗನ್ ತೋರಿಸಿ ಬೆದರಿಸಿದರೂ ಅಳುಕದೆ ಕಳ್ಳರನ್ನು ಹಿಮ್ಮೆಟ್ಟಿಸಿದ ಮಹಿಳೆ; ವಿಡಿಯೋ ವೈರಲ್

ದರೋಡೆಕೋರರು ಏಕಾಏಕಿ ನುಗ್ಗಿದಾಗ ಕೆಲವರು ತಮ್ಮ ಸಾಹಸ ಪ್ರದರ್ಶಿಸಿ ಅಪಾಯದಿಂದ ಪಾರಾಗಿರೋ ಅನೇಕ ಘಟನೆಗಳು ನಡೆದಿದೆ. ಇದೀಗ ಹಾಡಹಗಲೇ ಬೈಕ್‌ ಸವಾರರಿಬ್ಬರು ಮಹಿಳೆಯೊಬ್ಬರ ಸರ ಕಿತ್ತು ಪರಾರಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಮಹಿಳೆ ಮಾತ್ರ ಭರವಸೆಯನ್ನು ಕಳೆದುಕೊಳ್ಳದೆ ಧೈರ್ಯದಿಂದ ಎದುರಿಸಿದ್ದಾಳೆ.

ಹೌದು, ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ, ಇಬ್ಬರು ಬೈಕ್ ಸವಾರರು ಹೆಲ್ಮೆಟ್ ಮತ್ತು ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡು, ಲಕ್ನೋದ ಕೃಷ್ಣನಗರ ಪ್ರದೇಶದಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿದ್ದಾರೆ.

ಬಂದೂಕು ತೋರಿಸಿ ಆಕೆಯ ಚಿನ್ನದ ಸರವನ್ನು ದೋಚಲಾಗಿದೆ. ಮಹಿಳೆಯು ತನ್ನ ಸ್ಕೂಟರ್ ಅನ್ನು ತನ್ನ ನಿವಾಸದ ಪ್ರವೇಶ ಗೇಟ್‌ಗೆ ಹೋಗುತ್ತಿರುವುದನ್ನು ದೃಶ್ಯಾವಳಿಗಳಲ್ಲಿ ನೋಡಬಹುದು. ಈ ವೇಳೆ ಇಬ್ಬರು ಬೈಕ್ ಸವಾರರು ದರೋಡೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂದೂಕು ತೋರಿಸಿದ್ರೂ ಎದೆಗುಂದದ ಮಹಿಳೆ ದುಷ್ಕರ್ಮಿಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಕಂಡುಬಂದಿದೆ. ಆಕೆ ತನ್ನ ವಾಹನದಿಂದ ಇಳಿದು ಬೈಕ್ ಸವಾರರ ಹಿಂದೆ ಓಡಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಪ್ರಾರಂಭಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular