HomeEntertainmentಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ....?

ಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ….?

ಸಾಮಾನ್ಯವಾಗಿ ಸಿನೆಮಾ ಮಂದಿಯೆಲ್ಲ ಐಷಾರಾಮಿ ಮನೆಗಳಲ್ಲಿ ವಾಸಿಸ್ತಾರೆ. ಮುಂಬೈನಲ್ಲಂತೂ ಅಂತಹ ಫ್ಲಾಟ್‌ಗಳಿಗೇನೂ ಕೊರತೆಯಿಲ್ಲ. ಬಾಲಿವುಡ್‌ ನಟಿ ಸೋನಂ ಕಪೂರ್‌ ಕೂಡ ಅಂಥದ್ದೇ ಐಷಾರಾಮಿ ಫ್ಲಾಟ್‌ಗೆ ಒಡತಿಯಾಗಿದ್ದರು. ಆದರೆ ಕೋಟಿ ಕೋಟಿ ಬೆಲೆಬಾಳುವ ಈ ಫ್ಲಾಟ್‌ ಅನ್ನು ಸೋನಂ ಮಾರಿಬಿಟ್ಟಿದ್ದಾರೆ. ಇದರಲ್ಲಿ ಸೋನಂಗೆ ಹೆಚ್ಚು ಲಾಭವೂ ಆಗಿಲ್ಲ. ಆದರೂ ಫ್ಲಾಟ್‌ ಮಾರಿದ್ದೇಕೆ? ಅಂತಹ ಸಂದರ್ಭವೇನಿತ್ತು ಅನ್ನೋದು ನೆಟ್ಟಿಗರ ಪ್ರಶ್ನೆ.

ಸೋನಂ ಕಪೂರ್ ಈ ಫ್ಲಾಟ್ ಅನ್ನು 31.48 ಕೋಟಿ ರೂಪಾಯಿಗೆ ಖರೀದಿಸಿದ್ದರು. ಡಿಸೆಂಬರ್‌ನಲ್ಲಿ ಈ ಫ್ಲಾಟ್ ಅನ್ನು 32.50 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಹಾಗಾಗಿ ಇದರಲ್ಲಿ ಸೋನಂಗೆ ಹೆಚ್ಚು ಲಾಭವಾಗಿಲ್ಲ ಅನ್ನೋದು ಸ್ಪಷ್ಟ. ನಟಿಯ ಈ ಫ್ಲಾಟ್ ಮುಂಬೈನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಪ್ರದೇಶದಲ್ಲಿದೆ. ಅತ್ಯಂತ ಪ್ರಶಾಂತವಾದ ಜಾಗ ಇದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

8 ವರ್ಷಗಳ ಹಿಂದೆ ಸೋನಂ ಇಲ್ಲಿ ಫ್ಲಾಟ್‌ ಕೊಂಡುಕೊಂಡಿದ್ದರು. ಅನಿಲ್ ಕಪೂರ್ ಪುತ್ರಿ ಈ ಫ್ಲಾಟ್‌ ಅನ್ನು ಹೆಚ್ಚು ಬಳಸಿಲ್ಲವಂತೆ. ಇಷ್ಟು ಬೇಗನೆ ಅದನ್ನು ಮಾರಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇತ್ತೀಚೆಗಷ್ಟೆ ಸೋನಂ ಕಪೂರ್‌ ಅಮ್ಮನಾಗಿ ಭಡ್ತಿ ಪಡೆದಿದ್ದಾರೆ. ಗಂಡು ಮಗುವಿನ ತಾಯಿಯಾಗಿರೋ ಸೋನಂ ಸದ್ಯ ಮದರ್‌ಹುಡ್‌ ಅನ್ನು ಆನಂದಿಸ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular