HomeKarnatakaಕೊಟ್ಟ ಹಣ ಹಿಂದಿರುಗಿಸಿಲ್ಲವೆಂದು ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಮನೆ ಮುಂದೆ ದಂಪತಿ ಪ್ರತಿಭಟನೆ...!

ಕೊಟ್ಟ ಹಣ ಹಿಂದಿರುಗಿಸಿಲ್ಲವೆಂದು ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಮನೆ ಮುಂದೆ ದಂಪತಿ ಪ್ರತಿಭಟನೆ…!

ತಮ್ಮಿಂದ ಸಾಲವಾಗಿ ಪಡೆದ 3.20 ಕೋಟಿ ರೂಪಾಯಿಗಳನ್ನು ಈವರೆಗೂ ಹಿಂದಿರುಗಿಸಿಲ್ಲವೆಂದು ಆರೋಪಿಸಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹಿರಿಸಾವೆಯ ದಂಪತಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿಯ ಮನೆ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಓಂ ಪ್ರಕಾಶ್ ಮತ್ತು ಅವರ ಪತ್ನಿ ತಮ್ಮ ಮಗುವಿನ ಜೊತೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಇರುವ ಅನಿತಾ ಪವನ್ ಅವರ ನಿವಾಸದ ಮುಂದೆ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದು, ಬಳಿಕ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಿತಾ ಪವನ್ ಅವರು 2019ರಲ್ಲಿ ಅಡವಿಟ್ಟಿರುವ ಚಿನ್ನಾಭರಣ ಹರಾಜಿಗೆ ಬಂದಿದೆ ಎಂದು ಹೇಳಿ ಓಂ ಪ್ರಕಾಶ್ ಅವರಿಂದ 1.60 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಬಳಿಕ ಫ್ಲಾಟ್ ರಿಜಿಸ್ಟ್ರೇಷನ್ ಗೆ ಮತ್ತೆ 1.60 ಕೋಟಿ ರೂಪಾಯಿ ಪಡೆದಿದ್ದು, ಒಟ್ಟು 3.20 ಕೋಟಿ ರೂಪಾಯಿಗಳನ್ನು ಈವರೆಗೂ ಹಿಂದಿರುಗಿಸಿರಲಿಲ್ಲ ಎಂದು ಹೇಳಲಾಗಿದೆ.

ಇದೀಗ ಪೊಲೀಸರ ಸಮ್ಮುಖದಲ್ಲಿ ನಡೆದ ಮಾತುಕತೆ ವೇಳೆ ಏಪ್ರಿಲ್ 10ರ ಒಳಗಾಗಿ ಹಣ ಮರಳಿಸಲು ಅನಿತಾ ಪವನ್ ಅವರ ಕುಟುಂಬ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular