HomeAgricultureಕೃಷಿಯೇತರ ಚಟುವಟಿಕೆಗಳಿಗಾಗಿ ಕೃಷಿ ಭೂಮಿ ಮಾರಾಟಕ್ಕೆ ಗೋವಾ ಸರ್ಕಾರದ 'ನಿರ್ಬಂಧ'

ಕೃಷಿಯೇತರ ಚಟುವಟಿಕೆಗಳಿಗಾಗಿ ಕೃಷಿ ಭೂಮಿ ಮಾರಾಟಕ್ಕೆ ಗೋವಾ ಸರ್ಕಾರದ ‘ನಿರ್ಬಂಧ’

ಕೃಷಿ ಭೂಮಿಯನ್ನು ಖರೀದಿಸಿ ಅದನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವುದನ್ನು ಗೋವಾ ಸರ್ಕಾರ ನಿರ್ಬಧಿಸಿದೆ. ಈ ಕುರಿತಂತೆ ನೂತನ ಮಸೂದೆಯನ್ನು ಅಂಗೀಕರಿಸಲಾಗಿದೆ.

ಭತ್ತದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ನೂತನ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಇದರ ಪ್ರಕಾರ ಕೃಷಿಯೇತರ ಚಟುವಟಿಕೆಗಳಿಗೆ ಕೃಷಿ ಭೂಮಿಯನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಖರೀದಿಸಬಹುದಾಗಿದ್ದರೂ ಸಹ ಆ ಭೂಮಿಯಲ್ಲಿ ಮೂರು ವರ್ಷಗಳವರೆಗೆ ಯಾವುದೇ ಕೃಷಿ ಕಾರ್ಯ ನಡೆಯದೆ ಹೋದರೆ ಅದನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular